ಪುಸ್ತಕ ರೂಪದಲ್ಲಿ ಅಂಬರೀಶ್

ಇತ್ತೀಚೆಗಷ್ಟೇ ನಮ್ಮನ್ನೆಲ್ಲಾ ಅಗಲಿದ ರೆಬೆಲ್ ಸ್ಟಾರ್ ಅಂಬರೀಶ್ ರ ಕುರಿತಂತೆ ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ಮಾತನಾಡಿದರೂ ಸಹ ಕಡಿಮೆಯೇ.. ಈಗಾಗಲೇ ಅವರ ಬಗ್ಗೆಸಾಕಷ್ಟು ಪತ್ರಿಕೆಗಳಲ್ಲಿ, ಅಂತರ್ಜಾಲ ಮಾಧ್ಯಮಗಳಲ್ಲಿ ವಿವರಗಳು ಪ್ರಕಟವಾಗಿವೆ. ಜೊತೆಗೆ ವಾಹಿನಿಗಳಲ್ಲಿ ಕೂಡಾ ಸಾಕಷ್ಟು ಕಾರ್ಯಕ್ರಮಗಳು ಪ್ರಸಾರವಾಗಿವೆ.

ಡಾ. ಶರಣ್ ಹುಲ್ಲೂರು ಬರೆದಿರುವ ಪುಸ್ತಕ

ಪುಸ್ತಕ ರೂಪದಲ್ಲಿ ಅಂಬರೀಶ್ ಅವರ ಬಗ್ಗೆ ಯಾವ ಪುಸ್ತಕವೂ ಬಂದಿರಲಿಲ್ಲ. ಈಗ ಆ ಕೆಲಸವನ್ನು ವಿಜಯ ಕರ್ನಾಟಕದ ಹಿರಿಯ ಪತ್ರಕರ್ತ ಡಾ. ಶರಣು ಹುಲ್ಲೂರು ಮಾಡಿದ್ದಾರೆ. ಇವರು ಹಲವಾರು ವರ್ಷಗಳಿಂದ ಸಿನಿಮಾ ಹಾಗೂ ಟಿ.ವಿ ಬರವಣಿಗೆಯಲ್ಲಿ ನಿರತರಾಗಿರುವವರು. ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದುಡಿಯುವ ಮಹಿಳೆಯರ ಬಗ್ಗೆ ಅವರು ಮಾಡಿದ ಸಂಶೋಧನೆಯಿಂದ ಇತ್ತೀಚೆಗೆ ಹಂಪಿ ವಿವಿ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಅಂಬರೀಶ್ ಬದುಕಿನ ಪುಸ್ತಕ ಬರಹಗಾರ ಡಾ. ಶರಣ್ ಹುಲ್ಲೂರುರವರು ಡಾ. ಅಂಬರೀಶ್ ಅವರನ್ನು ಬಹಳಷ್ಟು ಸಾರಿ ಭೇಟಿ ಮಾಡಿದ್ದಾರೆ. ಅದರಂತೆ ಅನೇಕರನ್ನು ಸಂಪರ್ಕ ಮಾಡಿ ಅಂಬರೀಶ್ ಬಗ್ಗೆ ಹೊಸ ಮಾಹಿತಿಗಳನ್ನು ಕಲೆ ಹಾಕಿ ಈಗ ಅಂಬರೀಶ್ ಪುಸ್ತಕವನ್ನು ಬರೆದಿದ್ದಾರೆ. ಕೆಲವೇ ದಿನಗಳಲ್ಲಿ ಈ ಪುಸ್ತಕ ಲೋಕಾರ್ಪಣೆ ಆಗಲಿದೆ.

ಈಗಾಗಲೇ ಈ ಪುಸ್ತಕದ ಬಗ್ಗೆ ಚಂದನವನದ ಅನೇಕ ಕಲಾವಿದರು, ತಂತ್ರಜ್ಞರು ಸೇರಿದಂತೆ ಹಲವಾರು ಮಂದಿ ಶುಭ ಹಾರೈಸಿದ್ದಾರೆ. ಇನ್ನು ಈ ‘ಅಂಬರೀಶ್’ ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು ಎಂಬ ಅಡಿಬರಹ ಇರುವ ಈ ಪುಸ್ತಕವನ್ನು ಸಾವಣ್ಣ ಪ್ರಕಾಶನ ಹೊರ ತರುತ್ತಿದೆ.

This Article Has 2 Comments
  1. Pingback: Elizabethtown Auto Glass Anytime

  2. Pingback: бинанс

Leave a Reply

Your email address will not be published. Required fields are marked *

Translate »
error: Content is protected !!