ಹುಟ್ಟುಹಬ್ಬದಂದು ಚಂದನ್‍ ಹೊಸ ಚಿತ್ರ ಘೋಷಣೆ

‘ಪ್ರೇಮ ಬರಹ’ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸಿದ್ದ ಚಂದನ್‍ ತಮ್ಮ ಹುಟ್ಟುಹಬ್ಬದಂದು ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಎವರೆಸ್ಟ್ ಕ್ರಿಯೇಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿರುವ ಚಂದನ್, ಅದರಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ಚಿತ್ರವನ್ನು ನಿರ್ದೇಶಿಸಿ, ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಹುಟ್ಟುಹಬ್ಬದಂದು ಚಿತ್ರದ ಮೇಕಿಂಗ್‍ ವೀಡಿಯೋ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. ಈ ಹೆಸರಿಡದ ಚಿತ್ರದಲ್ಲಿ ಚಂದನ್‍, ನಿಮಿಕಾ ರತ್ನಾಕರ್, ಸಾಧು ಕೋಕಿಲ, ಶ್ರುತಿ, ಅವಿನಾಶ್‍, ಗಿರಿ ಶಿವಣ್ಣ ಮುಂತಾದವರು ನಟಿಸುದ್ದಾರೆ. ಎಚ್.ಸಿ. ವೇಣು ಛಾಯಾಗ್ರಹಣ ಮತ್ತು ಜೆಸ್ಸಿ ಗಿಫ್ಟ್ ಸಂಗೀತ  ಚಿತ್ರಕ್ಕಿದೆ.

ಪ್ರೇಮ ಬರಹ’ ಚಿತ್ರ ಬಿಡುಗಡೆಯಾಗಿ ಆರು ವರ್ಷ ನಂತರ ಚಂದನ್‍ ಅವರು ಹೊಸ ಚಿತ್ರ ದಲ್ಲಿ ಹೀರೊ ಆಗುವ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!