ಸರ್ಕಾರಿ ವಕೀಲರನ್ನು ಬದಲಿಸಲು ದರ್ಶನ್ ಗ್ಯಾಂಗ್ ದೊಡ್ಡ ಸಂಚು ರೂಪಿಸಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ದರ್ಶನ್ ತಮ್ಮ ಆಪ್ತರ ಮೂಲಕ ಎಸ್ಪಿಪಿ ಪ್ರಸನ್ನ ಕುಮಾರ್ ಅವರನ್ನು ಬದಲಾಯಿಸಲು ಕಸರತ್ತು ನಡೆಸಿದ್ದರು. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಎಸ್ಪಿಪಿ ಪ್ರಸನ್ನ ಕುಮಾರ್ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳಿದೆ ಎಂಬುದಾಗಿ ವರದಿ ಆಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ದರ್ಶನ್ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಆಗಿ ನೇಮಕ ಮಾಡಿದ್ದು ದರ್ಶನ್ ಬಳಗಕ್ಕೆ ಆತಂಕ ತಂದಿದೆ. ವಕೀಲ ಪ್ರಸನ್ನ ಕುಮಾರ್ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಇದು ದರ್ಶನ್ ಚಿಂತೆಗೆ ಕಾರಣ ಆಗಿದೆ.
ದರ್ಶನ್ ಮತ್ತು ಆಪ್ತರು ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡಲು ಮುಂದಾಗಿದ್ದರು. ಎಷ್ಟೇ ಕಸರತ್ತು ಮಾಡಿದರೂ ದರ್ಶನ್ ಗ್ಯಾಂಗ್ ತಂತ್ರ ಫಲಿಸಿಲ್ಲ. ದರ್ಶನ್ ಪ್ರಕರಣದಲ್ಲಿ ಎಎಸ್ಪಿಪಿ ಪ್ರಸನ್ನ ಕುಮಾರ್ ಪರ ಅಧಿಕಾರಿ ವರ್ಗ ಗಟ್ಟಿಯಾಗಿ ನಿಂತಿದೆ.
ಈ ಮೊದಲು ದರ್ಶನ್ ಜೈಲಿನಲ್ಲಿ ಸವಲತ್ತು ಪಡೆದಿದ್ದ ವಿಚಾರ ಚರ್ಚೆ ಹುಟ್ಟುಹಾಕಿತ್ತು. ಈಗ ಅವರ ಸರ್ಕಾರಿ ವಕೀಲರನ್ನು ಬದಲಿಸಲು ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡಲು ಮುಂದಾಗಿದ್ದು ಅನೇಕರಿಗೆ ಶಾಕಿಂಗ್ ನೀಡಿದೆ.
Be the first to comment