ಹಫ್ತಾ ಟೀಸರ್ ಬಿಡುಗಡೆ ಮಾಡಿದ ಶ್ರೀಮುರಳಿ

ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು ಭಾವಿಸಿದರೆ ಅದು ಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ವಿಜಯ್‍ಯಾರ್ಡಲ್ಲಿ ರಾಗ ಸಂಯೋಜಿಸಿದ್ದರೆ, ಹಿನ್ನಲೆ ಸಂಗೀತವನ್ನು ಗೌತಂಶ್ರೀವತ್ಸ ಒದಗಿಸಿದ್ದಾರೆ. ಛಾಯಗ್ರಹಣ ಸೂರಿಸಿನಿಟೆಕ್, ಸಂಕಲನ ರಘುನಾಥ್.ಎಲ್. ನಿರ್ವಹಿಸಿದ್ದಾರೆ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ದುಡಿದಿರುವ ಪ್ರಕಾಶ್‍ಹೆಬ್ಬಾಳ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಚೂಚ್ಚಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ, ಖಳನಟನಾಗಿ ನಟಿಸಿದ್ದ ವರ್ಧನ್‍ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿ ಎರಡು ಶೇಡ್‍ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಬುದ್ದವಂತಿಕೆಯಿಂದ ಅಪರಾದದ ಸುಳಿವು ಸಿಗದಂತೆ ಸೈಲೆಂಟ್ ಕಿಲ್ಲರ್. ಇವನದು ಏನಿದ್ದರೂ ಗನ್ ಮಾತಾಡುತ್ತೆ ಎನ್ನುವ ಪಾತ್ರದಲ್ಲಿ ರಾಘವನಾಗ್ ನಾಯಕನಾಗಿ ಮೂರನೆ ಸಿನಿಮಾ. ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬಶ್ರೀನೀನಾಸಂ ರಾಮರಾಮರೇ ನಂತರ ನಾಯಕಿಯಾಗಿ ಅವಕಾಶ ಸಿಕ್ಕಿದೆಯಂತೆ. ಕೂರ್ಗ್ ಮೂಲದ ಸೌಮ್ಯತಿತೀರ ಚೂಚ್ಚಲ ಚಿತ್ರದಲ್ಲೆ ವೇಶ್ಯಯಾಗಿ ದೃಶ್ಯದಲ್ಲಿ ಅಶ್ಲೀಲ ಇಲ್ಲದಿರುವುದರಿಂದ ಅಭಿನಯಿಸಿರುವುದಾಗಿ ಸಮರ್ಥನೆ ಉತ್ತರ ನೀಡುತ್ತಾರೆ. ಮುಖ್ಯ ಖಳನಾಯಕನಾಗಿ ಬಾಲ್‍ರಾಜ್‍ವಾಡಿ ಉಳಿದಂತೆ ದಶಾವರಚಂದ್ರು, ಉಗ್ರಂರವಿ ಮುಂತಾದವರು ತಂಡದಲ್ಲಿ ಇದ್ದಾರೆ.
ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ಮೊದಲು ಪೂರ್ವ ತಯಾರಿ ಮಾಡಿಕೊಂಡು ಶುರು ಮಾಡಿದಲ್ಲಿ ಅದ್ಬುತವಾಗಿ ಚಿತ್ರವು ಬರುತ್ತದೆ. ಡಾ.ರಾಜ್‍ಕುಮಾರ್ ಕಂಪೆನಿಯಲ್ಲಿ ಇದೆಲ್ಲವು ನಡೆಯುತ್ತಿತ್ತು. ಕೆಲಸ ನಮ್ಮದು, ಅದಕ್ಕೆ ಫಲಿತಾಂಶವನ್ನು ಕೊಡುವುದು ಪ್ರೇಕ್ಷಕ ಪ್ರಭುಗಳು. ನಿರ್ಮಾಪಕರಿಗೆ ಹಣ ವಾಪಸ್ಸು ಬರಲೆಂದು ಹಾರೈಸಿದರು.

ಟೀಸರ್‍ಗೆ ಚಾಲನೆ ನೀಡಿದ ಶ್ರೀಮುರಳಿ ಸೆಂಟಿಮೆಂಟ್ ನಾಟ್ ಅಲೋಡ್ ಟ್ಯಾಗ್‍ಲೈನ್‍ದಲ್ಲಿ ಇರುವಂತೆ, ಚಿತ್ರರಂಗದಲ್ಲೂ ಇದು ನಡೆಯುವುದಿಲ್ಲ. ಅಸಲಿ ಕೆಲಸ ತೆರೆ ಕಂಡ ನಂತರ ಗೊತ್ತಾಗುತ್ತದೆ. ರಂಗಭೂಮಿ ಕಲಾವಿದರುಗಳನ್ನು ಕಂಡರೆ ಗೌರವ, ಮರ್ಯಾದೆ ಜಾಸ್ತಿ ಬರುತ್ತದೆ. ನಮಗಿಂತ ಕಲೆಯಲ್ಲಿ ಗೆದ್ದವರು. ಎಲ್ಲಾದರಲ್ಲಿ ಅದೃಷ್ಟ ಒಲಿಯುವುದಿಲ್ಲ. ನಾವು ಮಾಡುವ ಶ್ರಮ, ಶ್ರದ್ದೆ, ಕೆಲಸವನ್ನು ಬೇರೆಯವರು ಶ್ಲಾಘಿಸಿದರೆ ಮಾತ್ರ ಯಶಸ್ಸು ಗಳಿಸಬಹುದು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಪ್ರತಿ ಸಿನಿಮಾವನ್ನು ಮೊದಲಿನಂತೆ ಮಾಡುತ್ತೆನೆ. ಒಳ್ಳೆ ಪ್ರತಿಭೆಗಳು ಬರಬೇಕು, ಚಿತ್ರರಂಗ ಬೆಳಿಬೇಕು ಎನ್ನುವಾಗ, ಮಧ್ಯೆ ಪ್ರವೇಶಿಸಿದ ಅಧ್ಯಕ್ಷರು ನೀವು ಕನ್ನಡ ಚಿತ್ರರಂಗ ಉದ್ದಾರವಾಗಬೇಕಾದರೆ ಪ್ರತಿ ವರ್ಷ ಕನಿಷ್ಟ ಎರಡು ಸಿನಿಮಾಗಳನ್ನು ನೀಡಬೇಕೆಂದು ಅಪ್ಪನಾಗಿ ಆದೇಶ, ಅಧ್ಯಕ್ಷರಾಗಿ ಕೋರಿದಾಗ, ಶ್ರೀಮುರಳಿ ನಗುವೇ ಉತ್ತರವಾಗಿತ್ತು.
ಕಾರ್ಯಕ್ರಮದಲ್ಲಿ ಉಮೇಶ್‍ಬಣಕಾರ್, ಇನ್ನು ಮುಂತಾದವರು ಆಗಮಿಸಿದ್ದರು. ಮೈತ್ರಿ ಕಟ್ಟಡಗಳ ಮಾಲೀಕ ಮೈತ್ರಿಮಂಜುನಾಥ್ ನಿರ್ಮಾಪಕರಾಗಿ ಎರಡನೆ ಪ್ರಯತ್ನ. ಸದ್ಯದಲ್ಲೆ ಧ್ವನಿಸಾಂದ್ರಿಕೆ ಅನಾವರಣ ನಂತರ ಮುಂದಿನ ವರ್ಷ ಚಿತ್ರವನ್ನು ಜನರಿಗೆ ತೋರಿಸಲು ತಂಡವು ಯೋಜನೆ ಹಾಕಿಕೊಂಡಿದೆ.
ಬಾಡಿ ಮತ್ತು ಗಾಡಿ ಸಂಬಂಧ

ರಾಜದೂತ್ ಮೋಟರ್ ಬೈಕ್‍ನ್ನು ‘ಗುರಿ’ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಓಡಿಸಿದ್ದರು. ಈಗ ಅದೇ ವಾಹನವು ಮತ್ತೆ ಚಾಲ್ತಿಗೆ ಬಂದಿದೆ. ಆಂಟಿಕ್ ಪೀಸ್ ಆಗಿದ್ದು, ಈಗಲೂ 5000 ಜನರು ಇದನ್ನು ಉಪಯೋಗಿಸುತ್ತಾ, ವ್ಯಾಟ್ಸ್‍ಪ್‍ನಲ್ಲಿ ಆರ್‍ಡಿ ಗ್ರೂಪ್ ಹಿಂಬಾಲಕರು ಇದ್ದಾರೆ. ಹಾಗಂತ ಮಾರ್ಕೆಟ್‍ಗೆ ಬಂದಿಲ್ಲ. ‘ಆರ್‍ಡಿ’ ಅಡಿಬರಹದಲ್ಲಿ ರಾಜದೂತ್ ಎನ್ನುವ ಸಿನಿಮಾದಲ್ಲಿ ಇದರ ಮೇಲೆ ಕತೆಯು ಸಾಗುತ್ತದೆ. ಇಬ್ಬರು ವಾಂಚಲ್ಯ ತುಂಬಿರುವ ಗೆಳಯರ ಮಧ್ಯೆ ವಾಹನ ಬರುತ್ತದೆ. ತಾತನೊಬ್ಬ ಆರ್‍ಡಿ ವಾಹನ ಮಾಲೀಕನಾಗಿದ್ದು, ಅದನ್ನು ಪಡೆದುಕೊಳ್ಳಲು ಇವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಇದರಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯ ಶುರುವಾಗಿ ವೈಮನಸ್ಯಕ್ಕೆ ದಾರಿಯಾಗುತ್ತದೆ. ಅಂತಿಮವಾಗಿ ತಾತ ಬೈಕ್‍ನ್ನು ಕೊಡ್ತನಾ ಅಥವಾ ಸ್ನೇಹ ಏನಾಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದ್ದು, ಜೊತೆಗೊಂದು ಸುಂದರ ಲವ್ ಸ್ಟೋರಿಯೊಂದು ತೆರೆದುಕೊಳ್ಳುತ್ತದೆ.
ರಿಯಲ್ ಎಸ್ಟೇಟ್ ನಡೆಸುತ್ತಿರುವ ಆರ್‍ಡಿ..ಅನಿಲ್ ಪೊರಕಿ ಹುಡುಗನಾಗಿ ನಾಯಕ ಮತ್ತು ನಿರ್ಮಾಪಕ. ಇವರಿಗೆ ಜೋಡಿಯಾಗಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ತೇಜುಪೊನ್ನಪ್ಪ ಅವರಿಗೆ ದ್ವಿತೀಯ ಅವಕಾಶ. ಸ್ಥಳೀಯನಾಗಿ ಏರಿಯಾವನ್ನು ಎದುರಿಸುತ್ತಾನೆ. ಆದರೆ ಲವರ್ ಮುಂದೆ ಹೆದರುತ್ತಾನೆ. ಅಮ್ಮನ ದುಡ್ಡಿನಿಂದ ಮಜಾ ಮಾಡುತ್ತಾ ಬಿಂದಾಸ್ ಜೀವನ ಸಾಗಿಸುವ ಆದರ್ಶ್‍ನಾರಾಯಣ್ ಉಪನಾಯಕ. ಮೊದಲ ಚಿತ್ರದಲ್ಲೆ ಬೈಕ್ ಓಡಿಸುತ್ತಾ ಬಜಾರಿಯಾಗಿ ರಿಶ್ವಿಭಟ್ ನಟನೆ ಇದೆ. ಬೈಕ್ ಮಾಲೀಕನಾಗಿ ನೀನಾಸಂಅಶ್ವಥ್, ಖಳನಟನಾಗಿ ವಿಶ್ರುತ್‍ರಾಜ್, ನಗಿಸಲು ಶ್ರೀನಿವಾಸ್ ಉಳಿದಂತೆ ಶಶಿಕಲಾ, ನಂದೀಶ್ ಮುಂತಾದವರ ತಾರಬಳಗವಿದೆ.
ಒಂಬತ್ತು ವರ್ಷದಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಪವನ್‍ಕುಮಾರ್.ಎಂ.ಎಸ್. ಕತೆ, ಚಿತ್ರಕತೆ, ಸಂಭಾಷಣೆ, ನೃತ್ಯ, ಸಾಹಿತ್ಯ ರಚಿಸಿ ಚೂಚ್ಚಲಬಾರಿ ನಿರ್ದೇಶನ ಕೆಲಸದ ಜೊತೆಗೆ ನೆಗಟೀವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಪೋಸ್ಟರ್‍ನಲ್ಲಿ ಪಾ1 ಎಂದು ಗುರುತಿಸಿಕೊಂಡಿದ್ದಾರೆ. ಬೆಂಗಳೂರು, ಮಡಕೇರಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅರುಣ್‍ಆಂಡ್ರ್ಯೂ ಸಂಗೀತ ಸಂಯೋಜಿಸಿದ್ದು, ವಿಜಯಪ್ರಕಾಶ್, ಚೇತನ್‍ನಾಯ್ಕ್, ಮಧುಶೇಖರ್, ಮಹಬೂಬ್‍ಸಾಬ್ ನಾಲ್ಕು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಲಹರಿ ಮ್ಯೂಸಿಕ್ ಹೊರತಂದಿರುವ ಧ್ವನಿಸಾಂದ್ರಿಕೆಯು ಲೋಕಾರ್ಪಣೆಗೊಂಡಿತು. ತಂಡಕ್ಕೆ ಶುಭಹಾರೈಸಲು ಲಹರಿವೇಲು, ಕರಿಸುಬ್ಬು ಒರಟಪ್ರಶಾಂತ್ ಮುಂತಾದವರು ಆಗಮಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!