ಕನ್ನಡ ಮತ್ತು ತೆಲುಗುನಲ್ಲಿ 18 ರಿಂದ 25

ಸ್ಮೈಲ್ ಜೋಹರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 18 ರಿಂದ 25 ಚಿತ್ರವನ್ನು ಈ ಹಿಂದೆ ತುಫಾನ್ ಹಾಗೂ ಬಳ್ಳಾರಿ ದರ್ಬಾರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “18 ರಿಂದ 25” ಈ ಚಿತ್ರವು ಇದೀಗ 2 ಭಾಷೆಗಳಲ್ಲಿ ತಯಾರಾಗಿದೆ. ಕನ್ನಡ ಮತ್ತು ತೆಲುಗುನಲ್ಲಿ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು ಜನವರಿ ತಿಂಗಳಿನಲ್ಲಿ ಹಾಡುಗಳು ಬಿಡುಗಡೆಯಾಗಲಿದ್ದು, ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. 18 ರಿಂದ 25 ರ ಹರೆಯದ ಹೃದಯಗಳ ಮಿಡಿತವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.

ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ.ಕೆ.ನಾಯ್ಡು ಛಾಯಾಗ್ರಹಣ, ಬಿ.ಮಲ್ಲಿ ಸಂಕಲನ, ಡಾ|| ವಿ.ನಾಗೇಂದ್ರ ಪ್ರಸಾದ್, ಸ್ಮೈಲ್‍ಶ್ರೀನು ಸಾಹಿತ್ಯ, ವೈಯಲೆನ್ಸ್ ವೇಲು ಸಾಹಸ, ಚಿರಂಜೀವಿ ನೃತ್ಯ ನಿರ್ದೇಶನವಿದೆ. ಅಭಿರಾಮ್, ಋಷಿತೇಜ, ಅಖಿಲಾ, ವಿದ್ಯಾಶ್ರೀ, ರಾಕ್ ಲೈನ್ ಸುಧಾಕರ್, ಫಾರೂಕ್‍ಖಾನ್, ನಾಗೇಶ್ವರಾವ್, ಉದಯ ಭಾಸ್ಕರ್, ರವಿರಾಮ್, ಪೋಲಾ ಶ್ರೀನಿವಾಸ್‍ಬಾಬು, ಭಾಗ್ಯಶ್ರೀ ಇನ್ನು ಮುಂತಾದವರ ತಾರಾಬಳಗವಿದೆ.

 

This Article Has 1 Comment
  1. Pingback: dumps with pin shop

Leave a Reply

Your email address will not be published. Required fields are marked *

Translate »
error: Content is protected !!