ಡಿ ಗ್ಯಾಂಗ್ ನಿಂದ ಕೊಲೆಯಾಗಿದ್ದ ರೇಣುಕಾಸ್ವಾಮಿ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಿರುವ ಫೋಟೋ ವೈರಲ್ ಆಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಮಾಡಿದ ಬಳಿಕ ಡಿಲೀಟ್ ಮಾಡಿದ್ದ ಫೋಟೋಗಳನ್ನು ಪೊಲೀಸರು ಆರೋಪಿಗಳ ಮೊಬೈಲ್ನಿಂದ ರಿಟ್ರೀವ್ ಮಾಡಿದ್ದಾರೆ. 10ಕ್ಕೂ ಹೆಚ್ಚು ಫೋಟೋ ರಿಟ್ರೀವ್ ಮಾಡಿದ್ದಾರೆ ಎನ್ನಲಾಗುತ್ತಿದೆ. ವಿನಯ್ ಮೊಬೈಲ್ನಲ್ಲಿ ರೇಣುಕಾಸ್ವಾಮಿ ಫೋಟೋ ಪತ್ತೆಯಾಗಿತ್ತು. ಆರೋಪಿ ವಿನಯ್ ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿ ಡಿಲೀಟ್ ಮಾಡಿದ್ದ. ಡಿಲೀಟ್ ಆದ ಫೋಟೋಗಳನ್ನು FSL ಟೀಂ ರಿಟ್ರೀವ್ ಮಾಡಿದೆ.
ಕಿಡ್ನಾಪ್ ಮಾಡಿದ ಬಳಿಕ ಆರೋಪಿಗಳು ರೇಣುಕಾಸ್ವಾಮಿಯನ್ನ ಶೆಡ್ಗೆ ಕರೆ ತಂದಿದ್ದರು. ಬಳಿಕ ಆತನಿಗೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ಮಾಡಿದ್ದರು. ಪವನ್, ಧನರಾಜ್ ಮತ್ತು 5 ಮಂದಿಯಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಎಲೆಕ್ಟ್ರಿಕ್ ಮೆಗ್ಗರ್ನಿಂದ ಕೈಗಳಿಗೆ ಬರೆ ಹಾಕಿ, ಶೆಡ್ನಲ್ಲಿ ನಿಲ್ಲಿಸಿದ್ದ ವಾಹನಗಳ ಬಳಿ ಚೆನ್ನಾಗಿ ಹೊಡೆದು ಅಲ್ಲೇ ಬಿಸಾಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಗೇಟ್ ಹೊರಗಿದ್ದ ಸೆಕ್ಯೂರಿಟಿ ಒಳಗೆ ಬಂದಿದ್ದಾರೆ. ಹಲ್ಲೆ ಮಾಡಿದನ್ನು ಸೆಕ್ಯೂರಿಟಿ ಗಾರ್ಡ್ ಕಣ್ಣಾರೆ ನೋಡಿದ್ದಾರೆ. ಬಳಿಕ ವಿನಯ್ಗೆ ಫೋನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಐ ವಿಟ್ನೇಸ್ ಆಗಿದ್ದು, ಈ ವೇಳೆ ವಿನಯ್ ಅವರು ನಮ್ಮವರೇ ಬಿಡು ಎಂದು ಸೆಕ್ಯೂರಿಟಿ ಗಾರ್ಡ್ ಬಳಿ ಹೇಳಿದ ಎನ್ನಲಾಗುತ್ತಿದೆ. ನಂತರ ರೇಣುಕಾಸ್ವಾಮಿ ಫೋಟೋ ಕಳಿಸುವುದಕ್ಕೆ ವಿನಯ್ ಹೇಳಿದ್ದಾನೆ. ವಿನಯ್ ಆ ಫೋಟೋಗಳನ್ನು ನಟ ದರ್ಶನ್ಗೆ ತೋರಿಸಿದ್ದಾನೆ. ಫೋಟೋ ನೋಡಿದ ಬಳಿಕ ದರ್ಶನ್ ಶೆಡ್ಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಗಾಯಗೊಂಡ ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ ರಿಟ್ರೀವ್ ಬಳಿಕ ಸಿಕ್ಕಿದೆ. ತನ್ನ ಬಿಟ್ಟು ಬಿಡುವಂತೆ ಬೇಡಿಕೊಂಡ ಫೋಟೋ ಕಾಣಿಸಿದೆ. ಮೈಮೇಲೆ ಹಾಕಿದ್ದ ಆತನ ಬನಿಯನ್ ಕಿತ್ತು ಹಾಕಿರುವುದನ್ನು ಫೋಟೋ ಕಾಣಿಸಿದೆ. ದರ್ಶನ್ ಶೆಡ್ಗೆ ಬಂದು ರೇಣುಕಾಸ್ವಾಮಿ ಮೇಲೆ ದಾಳಿ ಮಾಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ ಬಿಸಾಡಿ ತುಳಿದಿದ್ದಾರೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಮುಖಕ್ಕೆ ಶೂ ಕಾಲಿನಿಂದ ಒದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಚಾರ್ಜ್ಶೀಟ್ನಲ್ಲಿ ರೇಣುಕಾಸ್ವಾಮಿ ಫೋಟೋಗಳನ್ನು ಲಗತ್ತಿಸಲಾಗಿದೆ. ಇದು ಪ್ರಕರಣದ ಪ್ರಮುಖ ಸಾಕ್ಷಿ ಆಗಿದೆ.
Be the first to comment