ದಾಖಲೆ ಮೊತ್ತಕ್ಕೆ ‘ಪುಷ್ಪ 2’ ಒಟಿಟಿ ಹಕ್ಕು ಮಾರಾಟ

ಲ್ಲು ಅರ್ಜುನ್ ನಟನೆಯ ‘ಪುಷ್ಪ 2’   ಸಿನಿಮಾದ ಒಟಿಟಿ ಹಕ್ಕುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ನೆಟ್​ಫ್ಲಿಕ್ಸ್​ಗೆ ಮಾರಾಟ ಮಾಡಲಾಗಿದೆ.

‘ಪುಷ್ಪ 2’ ಸಿನಿಮಾದ ಎಲ್ಲ ಭಾಷೆಯ ಹಕ್ಕನ್ನು ನೆಟ್​ಫ್ಲಿಕ್ಸ್​ಗೆ ಮಾರಾಟ ಮಾಡಲಾಗಿದೆ. ಇತ್ತೀಚೆಗೆ  ದೊಡ್ಡ ಸಿನಿಮಾಗಳು ತಮ್ಮ ಸಿನಿಮಾಗಳನ್ನು ನೆಟ್​ಫ್ಲಿಕ್ಸ್​ ಹಾಗೂ ಅಮೆಜಾನ್ ಎರಡೂ ವೇದಿಕೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ‘ಪುಷ್ಪ 2’ ಸಿನಿಮಾವನ್ನು ಕೇವಲ ನೆಟ್​ಫ್ಲಿಕ್ಸ್​ಗೆ ಮಾತ್ರವೇ ಮಾರಾಟ ಮಾಡಲಾಗಿದೆ.

‘ಪುಷ್ಪ 2’ ಸಿನಿಮಾದ ಒಟಿಟಿ ಹಕ್ಕು ಖರೀದಿ ಮಾಡಲು ನೆಟ್​ಫ್ಲಿಕ್ಸ್​  270 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಇತ್ತೀಚೆಗಿನ ಇನ್ಯಾವುದೇ ಸಿನಿಮಾಕ್ಕೆ ನೀಡಲಾಗಿಲ್ಲ ಎನ್ನಲಾಗುತ್ತಿದೆ. ಇತ್ತೀಚೆಗೆ ಒಟಿಟಿಗೆ ಬಂದ ‘ಕಲ್ಕಿ 2898 ಎಡಿ’ ಸಿನಿಮಾದ ಹಕ್ಕುಗಳಿಗೂ  ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿಲ್ಲ ಎನ್ನಲಾಗುತ್ತಿದೆ. ‘ಪುಷ್ಪ’ ಸಿನಿಮಾ 2021 ರಲ್ಲಿ ಸುಮಾರು 50 ಕೋಟಿ ಮೊತ್ತಕ್ಕೆ ಒಟಿಟಿಗೆ ಮಾರಾಟವಾಗಿತ್ತು.

‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. . ಇದರ ನಡುವೆ ಸಿನಿಮಾದ ಮಾರಾಟ ಕಾರ್ಯಕ್ಕೂ ಚಾಲನೆ ದೊರೆತಿದೆ.

‘ಪುಷ್ಪ 2’ ಸಿನಿಮಾ ಆಗಸ್ಟ್ 15 ಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗಿತ್ತು.  ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು ಸಿನಿಮಾದ ಬಿಡುಗಡೆ ಡಿಸೆಂಬರ್​ನಲ್ಲಿ ಆಗಲಿದೆ.

ನಿರ್ಮಾಪಕರೇ ಹೇಳಿರುವಂತೆ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಮೊದಲಾರ್ಧದ ಎಡಿಟ್ ರೆಡಿಯಾಗಲಿದೆ. ನವೆಂಬರ್​ನಲ್ಲಿ ಎರಡನೇ ಅರ್ಧದ ಎಡಿಟ್ ರೆಡಿಯಾಗಲಿದೆ. ನವೆಂಬರ್ ತಿಂಗಳಲ್ಲಿ  ಫೈನ್ ಟ್ಯೂನಿಂಗ್ ನಡೆಯಲಿದ್ದು, ಅದೇ ತಿಂಗಳ ಅಂತ್ಯದಲ್ಲಿ ಸೆನ್ಸಾರ್ ಪ್ರಮಾಣ ಪತ್ರ ದೊರಕಲಿದೆ.  ಬಳಿಕ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!