ವಿನಾಯಕ ಚತುರ್ಥಿಗೆ ‘ಮ್ಯಾಕ್ಸ್‌’ ರಿಲೀಸ್‌ ದಿನಾಂಕ ಘೋಷಣೆ

ಸುದೀಪ್‌  ನಟನೆಯ ಹೊಸ ಸಿನಿಮಾ ‘ಮ್ಯಾಕ್ಸ್‌’  ರಿಲೀಸ್‌ ದಿನಾಂಕ ಗಣೇಶ ಚತುರ್ಥಿಯಂದು ಘೋಷಣೆಯಾಗಲಿದೆ.

ವಿಜಯ್‌ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್‌’ನ ಟೈಟಲ್‌ ಟ್ರ್ಯಾಕ್‌ ‘ಮ್ಯಾಕ್ಸಿಮಮ್‌ ಮಾಸ್‌’, ಸುದೀಪ್‌ ಸೋಮವಾರ  51ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಬಿಡುಗಡೆಯಾಗಿದೆ.

”ಅಭಿಮಾನಿಗಳು ನಮ್ಮ ಪ್ರತಿಬಿಂಬ. ಹೋದಲೆಲ್ಲ ತಲೆಎತ್ತಿಕೊಂಡು ಓಡಾಡಲು ಅಭಿಮಾನಿಗಳೇ ಕಾರಣ. ಯಾವತ್ತೂ ನಾವು ಸಂಪಾದನೆ ಮಾಡಿರುವ ಹೆಸರಿಗೆ ಕಳಂಕ ತರುವ ಕೆಲಸ ಇವರು ಮಾಡಿಲ್ಲ, ಮಾಡೋದೂ ಇಲ್ಲ. ವ್ಯಕ್ತಿತ್ವದಲ್ಲಿ ನಾವು ದೊಡ್ಡವರಾಗಬೇಕಾದರೆ ಕೇವಲ ಸಿನಿಮಾ ಮಾತ್ರ ಸಾಲುವುದಿಲ್ಲ. ನಮ್ಮ ಅಕ್ಕಪಕ್ಕ ಇರುವ ಸ್ನೇಹಿತರು, ಕುಟುಂಬ, ಮಾಧ್ಯಮ ಮಿತ್ರರು ಚೆನ್ನಾಗಿದ್ದಾರೆ. ಹೀಗಾಗಿ ನಾನೂ ಚೆನ್ನಾಗಿದ್ದೇನೆ. ನನ್ನ ಅಭಿಮಾನಿಗಳಲ್ಲಿ ಒಳ್ಳೆತನ ಇದೆ. ಅದಕ್ಕೇ ನಾವು ಇಷ್ಟು ಒಳ್ಳೆಯವರು. ಸದ್ಯದಲ್ಲೇ ಮ್ಯಾಕ್ಸ್‌ ಸಿನಿಮಾವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ’ ಎಂದರು ಸುದೀಪ್‌.

‘ಮ್ಯಾಕ್ಸಿಮಮ್‌ ಮಾಸ್‌’ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂ.ಸಿ. ಬಿಜ್ಜು ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಮ್ಯಾಕ್ಸ್‌’ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ  ನಟಿಸಿದ್ದಾರೆ.

ಸುದೀಪ್‌ ಜನ್ಮದಿನದಂದೇ ಅನೂಪ್‌ ಭಂಡಾರಿ ನಿರ್ದೇಶನದ ಹೊಸ ಸಿನಿಮಾ ‘ಬಿಲ್ಲಾ ರಂಗ ಬಾಷಾ’ದ ಟೈಟಲ್‌ ಪೋಸ್ಟರ್‌ ಬಿಡುಗಡೆಯಾಗಿದೆ.  ಸಿನಿಮಾವನ್ನು ‘ತೆಲುಗಿನ ಹಿಟ್‌ ಸಿನಿಮಾ ‘ಹನುಮಾನ್‌’ ನಿರ್ಮಾಣ ಮಾಡಿದ್ದ ಪ್ರೈಂ ಶೋ ಎಂಟರ್‌ಟೇನ್ಮೆಂಟ್‌ ಸಂಸ್ಥೆ  ನಿರ್ಮಾಣ ಮಾಡಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!