ವಿನಯ್ ರಾಜಕುಮಾರ್

‘ಪೆಪೆ’ ನಾಳೆ ತೆರೆಗೆ

ವಿನಯ್ ರಾಜಕುಮಾರ್ ಅಭಿನಯದ ‘ಪೆಪೆ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ‘ಪೆಪೆ’ ಚಿತ್ರದಲ್ಲಿ ವಿನಯ್ ರಾಜಕುಮಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಳ್ಳಿಯೊಂದರ ಗ್ಯಾಂಗ್‌ ವಾರ್‌ ಕಥೆ ಈ ಸಿನಿಮಾದಲ್ಲಿದೆ. ವಿನಯ್‌ ರಾಜ್‌ಕುಮಾರ್‌ ಮಾಡಿರುವುದು ಕೆಲವೇ ಸಿನಿಮಾ ಆದರೂ ಆರಂಭದಿಂದಲೂ ಹೊಸ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಗ್ಯಾಂಗ್‌ ಲೀಡರ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್‌, ಪೋಸ್ಟರ್‌  ಕಂಪ್ಲೀಟ್‌ ಮಾಸ್‌ ಲುಕ್‌ನಲ್ಲಿದೆ. ರಕ್ತಸಿಕ್ತವಾದ ವಿನಯ್‌ ಫೋಟೊಗಳು ಈಗಾಗಲೇ ವೈರಲ್‌ ಆಗಿವೆ.

”ಇದು ನನ್ನ ಮೊದಲ ಆ್ಯಕ್ಷನ್‌ ಸಿನಿಮಾ. ಸ್ಕ್ರಿಪ್ಟ್ ಉತ್ತಮವಾಗಿದ್ದ ಕಾರಣ ನಾನು ಈ ಸಿನಿಮಾ ಒಪ್ಪಿಕೊಂಡೆ. ‘ಪೆಪೆ’ ಯಲ್ಲಿ ನಾಯಕನಾದರೂ, ಅವನ ಸುತ್ತ ಇರುವ ಕ್ಯಾರೆಕ್ಟರ್‌ಗಳು ಬಹಳ ಮುಖ್ಯ. ಫೈಟ್‌ಗಳಲ್ಲಿ ಇಂಟೆನ್ಸ್‌ ಇದ್ದು, ಪ್ರತಿಯೊಂದು ತೆರೆ ಮೇಲೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗಲಿದೆ” ಎಂದು ವಿನಯ್‌ ರಾಜ್‌ಕುಮಾರ್‌ ಹೇಳಿದ್ದಾರೆ.

ವಿನಯ್ ರಾಜಕುಮಾರ್

”ಸಿನಿಮಾದಲ್ಲಿನಾನು ರಗಡ್‌ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಹೆಸರು ಇದರಲ್ಲಿ ಪ್ರದೀಪ. ಆದರೆ ಹುಡುಗರು ಪೆಪೆ ಎಂದು ಕರೆಯುತ್ತಿರುತ್ತಾರೆ. ಇದೊಂದು ಕಲ್ಟ್‌ ಸಿನಿಮಾ” ಎಂದಿದ್ದಾರೆ  ವಿನಯ್‌.

ಚಿತ್ರವನ್ನು ಉದಯ್ ಸಿನಿ ವೆಂಚರ್ ಮತ್ತು ದೀಪಾ ಫಿಲಂಸ್ ಬ್ಯಾನರ್ ನಲ್ಲಿ ಉದಯ್ ಶಂಕರ್ ಎಸ್ ಹಾಗೂ ಬಿ ಎಂ ಶ್ರೀರಾಮ್ ಕೋಲಾರ್ ನಿರ್ಮಾಣ ಮಾಡಿದ್ದಾರೆ. ವಿನಯ್ ರಾಜಕುಮಾರ್ ಸೇರಿದಂತೆ ಯಶ್ ಶೆಟ್ಟಿ, ಕಾಜಲ್ ಕುಂದಾರ್, ನವೀನ್ ಡಿ ಪಡೀಲ್, ಮಯೂರ್ ಪಟೇಲ್, ಮೇದಿನಿ ಕೆಳಮನೆ, ರವಿಪ್ರಸಾದ್ ಮಂಡ್ಯ, ಕಿಟ್ಟಿ ಶ್ರೀಧರ್, ಶಶಿಧರ್ತ್, ಶಶಿಧರ್ತ್ ರಾಜವಾಡಿ, ಅರುಣಾ ಬಾಲರಾಜ್, ಸಂದ್ಯಾ ಅರೆಕೆರೆ, ಶಿವು ಕಬ್ಬನಹಳ್ಳಿ ಬಣ್ಣ ಹಚ್ಚಿದ್ದಾರೆ.

‘ಪೆಪೆ’ಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು, ಮನು ಶೇಡ್ಗಾರ್ ಸಂಕಲನ ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣವಿದೆ. ಡಾ. ಕೆ ರವಿವರ್ಮ ಚೇತನ್ ಡಿಸೋಜಾ, ಹಾಗೂ ಡಿಫ್ರೆಂಟ್ ಡ್ಯಾನಿ ನರಸಿಂಹ ಅವರ ಸಾಹಸ ನಿರ್ದೇಶನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!