ಕನ್ನಡದ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕೆ ಪ್ರಭಾಕರ್(64) ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಕೆ ಪ್ರಭಾಕರ್ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಲಿಸದೆ ನಿಧನರಾಗಿದ್ದಾರೆ.
ಪ್ರಭಾಕರ್ ಅವರು ವಿಷ್ಣುವರ್ಧನ್, ಉಪೇಂದ್ರ, ಅಂಬರೀಶ್, ಶಶಿಕುಮಾರ್ ಅವರ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವಳೇ ನನ್ನ ಗೆಳತಿ, ಮುದ್ದಿನ ಮಾವ, ತುಂಬಿದ ಮನೆ, ಸೋಲಿಲ್ಲದ ಸರದಾರ, ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ನಟನೆಯ ‘ಅಣ್ಣ – ತಂಗಿ’ ಚಿತ್ರಕ್ಕೂ ಇವರೇ ನಿರ್ಮಾಪಕರಾಗಿದ್ದರು. ಕಾಶಿನಾಥ್-ಭವ್ಯ ನಟನೆಯ ‘ಅವಳೇ ನನ್ನ ಹೆಂಡ್ತಿ’, ವಿಷ್ಣುವರ್ಧನ್-ಪ್ರೇಮಾ ಅಭಿನಯದ ‘ಎಲ್ಲರಂಥಲ್ಲ ನನ್ನ ಗಂಡ’, ಉಪೇಂದ್ರ-ಶಿವರಾಜ್ಕುಮಾರ್ ಒಟ್ಟಾಗಿ ಅಭಿನಯಿಸಿದ ‘ಲವ-ಕುಶ’ ಮುಂತಾದ ಸಿನಿಮಾಗಳನ್ನು ಕೆ. ಪ್ರಭಾಕರ್ ಅವರು ನಿರ್ಮಾಣ ಮಾಡಿದ್ದರು.
ಗ್ಯಾಂಗ್ ಲೀಡರ್, ಸೇರಿದಂತೆ ಕನ್ನಡದಲ್ಲಿ ಹಲವು ಚಿತ್ರಗಳನ್ನು ಪ್ರಭಾಕರ್ ನಿರ್ಮಾಣ ಮಾಡಿದ್ದಾರೆ. ತೆಲುಗು ಚಿತ್ರರಂಗದಲ್ಲೂ ಕೂಡ ಹಲವು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೌಟುಂಬಿಕ ಪ್ರೇಕ್ಷಕರನ್ನು ರಂಜಿಸುವ ಸಿನಿಮಾಗಳನ್ನು ಮಾಡಿ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.
ಕೆ ಪ್ರಭಾಕರ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
Be the first to comment