ಕಳರಿಪಯಟ್ಟು ಕಲಿಯುತ್ತಿರುವ ರಿಷಬ್ ಶೆಟ್ಟಿ

‘ಕಾಂತಾರ ಚಾಪ್ಟರ್ 1’ ಸಿನಿಮಾಗಾಗಿ ರಿಷಬ್ ಶೆಟ್ಟಿ  ಕಳರಿಪಯಟ್ಟು ಕಲಿಯುತ್ತಿದ್ದಾರೆ. ರಿಷಬ್ ಶೆಟ್ಟಿ ಕಳರಿಪಯಟ್ಟು ಕಲಿಯುತ್ತಿರುವ ಫೋಟೋ ಪ್ರಕಟಿಸಿದ್ದು ಫೋಟೋ ವೈರಲ್ ಆಗಿದೆ.

ಸಿನಿಮಾದ ಸಾಹಸ ದೃಶ್ಯಗಳು ವಿಶೇಷವಾಗಿರಲಿದೆ. ಇದಕ್ಕಾಗಿ ಕೇರಳ ಮೂಲದ ಸಾಹಸ ಕಲೆ ಕಳರಿಪಯಟ್ಟು ಕಲಿಯಲಿದ್ದಾರೆ ಎಂದು  ಸುದ್ದಿಗಳಿತ್ತು. ಇದೀಗ  ರಿಷಬ್ ಅವರೇ ಫೋಟೋ ಪ್ರಕಟಿಸುವ ಮೂಲಕ ಅದನ್ನು ಖಚಿತಪಡಿಸಿದ್ದಾರೆ. ರಿಷಬ್ ಕಚ್ಚೆ ಕಟ್ಟಿಕೊಂಡು ಗುರಾಣಿ ಹಿಡಿದುಕೊಂಡು ಏಕಾಗ್ರತೆಯಿಂದ ಕಳರಿ ಭಂಗಿಯಲ್ಲಿರುವ ಫೋಟೋ ವೈರಲ್ ಆಗಿದೆ.

ರಿಷಬ್ ಪ್ರಕಟಿಸಿರುವ ಫೋಟೋಗೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಮೇಲೆ ನಮಗೆ ಕಾಂತಾರ ಚಾಪ್ಟರ್ 1 ರ ಮೇಲೆ ನಿರೀಕ್ಷೆ ಹೆಚ್ಚಾಗಿದೆ ಎಂದಿದ್ದಾರೆ.

‘ಕಾಂತಾರ’ ಸಕ್ಸಸ್ ಆದ ಮೇಲೆ ರಿಷಬ್ ಸಾಕಷ್ಟು ತಯಾರಿ ಮಾಡಿಕೊಂಡೇ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ಆರಂಭಿಸಿದ್ದಾರೆ.. ಈ ಸಿನಿಮಾದ ಕತೆ ಕದಂಬರ ಕಾಲದ್ದು ಎಂದು  ರಿಷಬ್ ಶೆಟ್ಟಿ ಸುಳಿವು ಕೊಟ್ಟಿದ್ದಾರೆ.  ರಿಷಬ್ ಶೆಟ್ಟಿ ವೇಷಭೂಷಣ, ಹಾವ ಭಾವಗಳೂ ಆ ಕಾಲಕ್ಕೆ ತಕ್ಕಂತೇ ಇರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!