ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ಯಾಂಗ್ ವಿರುದ್ಧ 4000 ಪುಟಗಳ ಸುದೀರ್ಘ ಚಾರ್ಜ್ಶೀಟ್ ಸಲ್ಲಿಸಲು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎನ್ನಲಾಗಿದೆ.
ಪ್ರಕರಣದಲ್ಲಿ 17 ಜನ ಆರೋಪಿಗಳಿದ್ದು 200ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಪೊಲೀಸರು 60 ದಿನಗಳ ಕಾಲ ತನಿಖೆ ಮಾಡಿದ್ದು ಚಾರ್ಜ್ ಶೀಟ್ ಕೋರ್ಟ್ಗೆ ಸಲ್ಲಿಸಲು ಕೌಂಟ್ ಡೌನ್ ಶುರುವಾಗಿದೆ.
ಸೆಪ್ಟೆಂಬರ್ 5ರ ಒಳಗೆ ಅಂದರೆ 90 ದಿನಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಲೇಬೇಕಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಬಹುತೇಕ ಚಾರ್ಜ್ಶೀಟ್ ರೆಡಿಯಾಗಿದ್ದು ಕಿಡ್ನಾಪ್, ಕೊಲೆ, ಶವ ಸಾಗಾಟದ ವಿಚಾರಗಳನ್ನು ದಾಖಲೆ ಮಾಡಲಾಗಿದೆ. 17 ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ದರ್ಶನ್ ಬಟ್ಟೆ ಮೇಲಿನ ರಕ್ತದ ಕಲೆಯ ರಿಪೋರ್ಸ್, ಸಾಕ್ಷಿಗಳ ಹೇಳಿಕೆ, ಆರೋಪಿಗಳು ಹೇಳಿಕೆ ಕೂಡಾ ದಾಖಲಿಸಲಾಗಿದೆ.
ಎಫ್ಎಸ್ಎಲ್ನಿಂದ ಇನ್ನೂ ಮೂರು ರಿಪೋರ್ಟ್ಗಳು ಬರಬೇಕಾಗಿದೆ. ಪಟ್ಟಣಗೆರೆ ಶೆಡ್ಗೆ ರೇಣುಕಾಸ್ವಾಮಿಯನ್ನು ಕರೆದೊಯ್ಯುವ ಫೋಟೋ, ಆರೋಪಿಗಳು ಶೆಡ್ಗೆ ಹೋಗುವ ಫೋಟೋ, ಮೃತದೇಹ ಕೊಂಡೊಯ್ಯುವ ಸಿಸಿಟಿವಿ ಫೋಟೇಜ್ ಕೂಡಾ ರಿಟ್ರೈವ್ ಮಾಡಲಾಗಿದೆ. ಸಾಕ್ಷಿಗಳು ಉಲ್ಟಾ ಹೊಡೆಯಬಾರದು ಎಂದು ಸಿಆರ್ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಲಾಗಿದೆ.
ಕೊನೆಯ ಹಂತದ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ಮಾತ್ರ ಬಾಕಿ ಇದೆ. ಪೊಲೀಸರು ಸಭೆ ನಡೆಸಿ ಈ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಪ್ರಕರಣ ದಿನ ಕಳೆದಂತೆ ದರ್ಶನ್ ವಿರುದ್ಧ ಸ್ಟ್ರಾಂಗ್ ಆಗುತ್ತಿದೆ.
Be the first to comment