ಈ ವಾರ ತೆರೆಗೆ `ಪರಸಂಗ’ ಹಾಗೂ `ಕ್ರಾಂತಿಯೋಗಿ ಮಹಾದೇವರು’
ಪರಸಂಗ
ಅಂದು 1978 ರಲ್ಲಿ ಹಿರಿಯ ನಟ ಲೋಕೇಶ್ ಅವರು ಅಭಿನಯ ಮಾಡಿದ್ದ `ಪರಸಂಗದ ಗೆಂಡೆತಿಮ್ಮ’ ಸ್ಮರಣೆಗೆ ಬರುತ್ತದೆ. ಈ ‘ಪರಸಂಗ’ ಚಿತ್ರದ ಶೀರ್ಷಿಕೆಯನ್ನು ಕೇಳಿದರೆ. ಇಂದು ?ಪರಸಂಗ? ಆದ್ಯ ಸಿನಿ ಹೌಸ್ ಅಡಿಯಲ್ಲಿ ತಯಾರಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವವರು ಕೆ ಎಂ ರಘು.
ಈ ಸಿನಿಮ ಸಹ ವಿಶೇಷ ಕಥೆಯನ್ನು ಒಳಗೊಂಡಿದೆ. ಎಚ್ ಕುಮಾರ್, ಎಂ ಮಹಾದೇವ ಗೌಡ, ಕೆ ಎಂ ಲೋಕೇಶ್ ನಿರ್ಮಾಣಕ್ಕೆ ಸಹ ನಿರ್ಮಾಪಕರಾಗಿ ಪ್ರಕಾಷ್ ಮಂಡ್ಯ, ಸಿದ್ದೆಗೌಡ ಎಸ್ ಸೇರಿಕೊಂಡಿದ್ದಾರೆ.
ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಮಿತ್ರ ಹೆಸರಾಂತ ನಗೆ ನಟ, ಅಕ್ಷತ ಶ್ರೀನಿವಾಸ್, ಮನೋಜ್, ತರುಣ್ ಸುಧೀರ್, ಕಾಮಿಡಿ ಕಿಲಾಡಿಗಳು ನಟರುಗಳಾದ ಗೋವಿಂದೆ ಗೌಡ, ಸಂಜು ಬಸಯ್ಯ, ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಕಲಾವಿದೆ ಚಂದ್ರ ಪ್ರಭ ಇದ್ದಾರೆ.
ಹರ್ಷ ವರ್ಧನರಾಜ್ ಸಂಗೀತ, ಸುಜೈ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಈ `ಪರಸಂಗ’ ಒಳಗೊಂಡಿದೆ.
ಕ್ರಾಂತಿ ಯೋಗಿ ಮಹಾದೇವರು ಇದೆ ಶುಕ್ರವಾರ
ಇದು ನಿರ್ದೇಶಕ ಸಾಯಿ ಪ್ರಕಾಶ್ ಅವರ 101 ನೇ ಸಿನಿಮಾ. ಪವಾಡ ಪುರುಷ, ಕ್ರಾಂತಿ ಯೋಗಿ, ಬ್ರಿಟಿಷರ ವಿರುದ್ದ ಹೋರಾಡಿದ ವ್ಯಕ್ತಿ ಈ ಕ್ರಾಂತಿಯೋಗಿ ಮಹಾದೇವರು. ಇಂಡಿ ತಾಲೂಕಿನ ಬಿಜಾಪುರ ಜಿಲ್ಲೆಯ ಮಹಾದೇವರು ಶ್ರೀ ಗಿರಿ ಮಲ್ಲೇಶ್ವರ ಭಕ್ತರು. 1910 ರಿಂದ 1980 ರ ವರೆಗೆ ಅವರ ಜೀವನ ಪಯಣ. ಹಲವಾರು ಬಾರಿ ದೇಶದ ಸ್ವತಂತ್ರಕ್ಕಾಗಿ ಸೆರೆಮನೆ ವಾಸ ಅನುಭವಿಸಿದವರು.
ನಟ ರಾಂಕುಮಾರ್ ಕ್ರಾಂತಿ ಯೋಗಿ ಮಹಾದೇವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಕುಮಾರ್, ಗಣೇಶ್ ರಾವ್, ರಮೇಶ್ ಭಟ್, ಸುಚಿತ್ರಾ, ಸಿಹಿಕಹಿ ಚಂದ್ರು, ರವಿ ಚೇತನ್, ಡಿಂಗ್ರಿ ನಗಾರಜ್, ಸಿತಾರಾ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಮಾಧವಾನಂದ ಶೇಗುಣಿಸಿ ಅವರ ಕಥೆ ಹಾಗೂ ಸಂಭಾಷಣೆ, ಜೆ ಜಿ ಕೃಷ್ಣ ಅವರ ಛಾಯಾಗ್ರಹಣ, ಬಿ ಬಲರಾಮ್ ಸಂಗೀತ, ಈಶ್ವರ್ ಸಾಹಸ, ರಾಜ ರವಿಶಂಕರ್ ನಿರ್ದೇಶನ ಸಹಾಯ ಮಾಡಿದ್ದಾರೆ.
ಶ್ರೀ ಶೈಲಗಾಣಿಗೆರೆ (ರಬಕವಿ) ಕ್ರಾಂತಿ ಯೋಗಿ ಮಹಾದೇವರ ಭಕ್ತರು ಸಹ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
Be the first to comment