ಮರಿ ಟೈಗರ್ 25ನೇ ಚಿತ್ರ ‘ಬಲರಾಮನ ದಿನಗಳು’

ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ 25 ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದ್ದು, ‘ಬಲರಾಮನ ದಿನಗಳು’ ಚಿತ್ರವನ್ನು “ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಕೆ.ಎಂ ಚೈತನ್ಯ ನಿರ್ದೇಶನದ 10ನೇ ಸಿನಿಮಾ ಇದಾಗಿದೆ. ಪದ್ಮಾವತಿ ಫಿಲಂಸ್ ನಿರ್ಮಾಣ ಸಂಸ್ಥೆಯ ವತಿಯಿಂದ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಬಲರಾಮನ ದಿನಗಳು ಚಿತ್ರ ಸಮಾಜ ಮತ್ತು ರಾಜಕೀಯದ ಅಂಶಗಳನ್ನು ಹೆಣೆಯುತ್ತಲೇ ಭೂಗತ ಲೋಕಕ್ಕೆ ಕಾಲಿಡುತ್ತದೆ. ಇದು ನೈಜ-ಜೀವನದ ಘಟನೆಗಳಿಂದ ಪ್ರೇರಿತವಾಗಿದೆ. ಇದು ಮನರಂಜನೆಯನ್ನು ನೀಡುವ ಕಾಲ್ಪನಿಕ ನಿರೂಪಣೆ ಹೊಂದಿದೆ. ಯಾವುದೇ ನಿರ್ದಿಷ್ಟ ವ್ಯಕ್ತಿಯ ಸುತ್ತ ಕೇಂದ್ರೀಕೃತವಾಗಿಲ್ಲ ಎಂದು ನಿರ್ದೇಶಕ ಕೆ.ಎಂ ಚೈತನ್ಯ ಹೇಳಿದ್ದಾರೆ.

ಚಿತ್ರತಂಡ ಇನ್ನಷ್ಟು ವಿವರಗಳನ್ನು ಆಗಸ್ಟ್ 23 ರಂದು ಅನಾವರಣಗೊಳಿಸಲಿದೆ. ಅಂದು ಪ್ರಮುಖ ನಟನನ್ನು ಪರಿಚಯಿಸಲಿದೆ.

ಈ ಚಿತ್ರ ಅಲ್ಲದೇ ವಿನೋದ್ ಪ್ರಭಾಕರ್ ಎರಡು ಇತರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ಮಾದೇವ ಮತ್ತು ಲಂಕಾಸುರ ನಿರ್ಮಾಣ ಹಂತದಲ್ಲಿವೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!