ಪೌಡರ್

ಆ. 23ಕ್ಕೆ ದಿಗಂತ್ ‘ಪೌಡರ್’ ಚಿತ್ರ ತೆರೆಗೆ

ದಿಗಂತ್ ಅಭಿನಯದ ‘ಪೌಡರ್’ ಚಿತ್ರ ಆಗಸ್ಟ್ 23ಕ್ಕೆ ಬಿಡುಗಡೆ ಆಗುತ್ತಿದೆ.

ನಿರ್ಮಾಪಕ ಕಾರ್ತಿಕ್‍ ಗೌಡ, ಆಗಸ್ಟ್ 23ಕ್ಕೆ ತ್ರಿವೇಣಿ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಆಗಸ್ಟ್ 15ರಿಂದ ಚಿತ್ರ ಮುಂದೂಡಿದ್ದು ನಿಜಕ್ಕೂ ಒಳ್ಳೆಯ ನಿರ್ಧಾರ. ಇಲ್ಲ ಪ್ರದರ್ಶನ ಡಿವೈಡ್‍ ಆಗೋದು. ಈಗ ಚಿತ್ರ ಒಂದು ವಾರ ಮುಂದಕ್ಕೆ ಹೋಗಿರುವುದರಿಂದ ಇನ್ನಷ್ಟು ಪ್ರಚಾರ ಮಾಡಬಹುದು’ ಎಂದಿದ್ದಾರೆ.

‘ಇದು ಬರೀ ಡ್ರಗ್ಸ್ ಅಥವಾ ಡ್ರಗ್ಸ್ ಕುರಿತು ಸಂದೇಶ ಚಿತ್ರ ಸಾರುವ ಚಿತ್ರ ಎಂದಲ್ಲ. ಇಲ್ಲೊಂದು ಡ್ರಗ್ಸ್ ಪ್ಯಾಕ್‍ ಮಿಸ್‍ ಆಗಿರುತ್ತದೆ. ಅದನ್ನು ಮಾರುವಾಗ ಏನೆಲ್ಲಾ ಆಗುತ್ತದೆ ಎನ್ನುವ ತಮಾಷೆಯ ಚಿತ್ರ. ಇಲ್ಲಿ ಯಾವುದೇ ಲಾಜಿಕ್‍ ಇಲ್ಲ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ’ ಎಂದಿದ್ದಾರೆ.

‘ಇದು ವಿಭಿನ್ನ ಚಿತ್ರ ಎನ್ನುವುದಕ್ಕಿಂತ ಇಂಥದ್ದೊಂದು ಪಾತ್ರವನ್ನು ಇದುವರೆಗೂ ಮಾಡಿರಲಿಲ್ಲ. ಇದು ನನಗೆ ತೃಪ್ತಿ ಕೊಟ್ಟ ಪಾತ್ರ. ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ. ಎಲ್ಲಾ ಸರಳವಾದ ಪಾತ್ರಗಳು. ಎಲ್ಲರಿಗೂ ಪ್ರಾಮುಖ್ಯತೆ ಇದೆ. ಎಲ್ಲರಿಗೂ ಅವರದ್ದೇ ಆದ ಕಥೆಗಳಿವೆ. ಈ ಸಿನಿಮಾ ಗೆದ್ದರೆ, ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುವುದಕ್ಕೆ ಧೈರ್ಯ ಬರುತ್ತದೆ’ ಎಂದು ದಿಗಂತ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಧನ್ಯಾ ರಾಮ್‍ಕುಮಾರ್‍ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು.

ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆ ಆಗಬೇಕಿತ್ತು. ಬಿಡುಗಡೆಗೆ ಕೆಲ ದಿನಗಳಿವೆ ಎನ್ನುವಾಗ ಚಿತ್ರವನ್ನು ನಿರ್ಮಾಪಕರು ಮುಂದೂಡಿದ್ದರು. ನಿರ್ಮಾಪಕರಾದ ಕಾರ್ತಿಕ್‍ ಮತ್ತು ಯೋಗಿ. ‘ಗೌರಿ’ ಮತ್ತು ‘ಕೃಷ್ಣಂ ಪ್ರಣಯ ಸಖಿ’ ಅದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಸುಮ್ಮನೆ ಸ್ಪರ್ಧೆ ಬೇಡ ಎಂದು ಹೇಳಿದ್ದರು.

ಪೌಡರ್

Be the first to comment

Leave a Reply

Your email address will not be published. Required fields are marked *

Translate »
error: Content is protected !!