IPT 12

IPT 12 ಕ್ರಿಕೆಟ್ ಟ್ರೋಫಿ ಎತ್ತಿ ಹಿಡಿದ ಶ್ರೀಲಂಕಾ ಲಾಯರ್ಸ್ ತಂಡ

‘ಎನ್ 1’ ಕ್ರಿಕೆಟ್ ಅಕಾಡೆಮಿಯ ಹೊಸ ಪ್ರಯತ್ನದ IPT 12 ಕ್ರಿಕೆಟ್ ಟೂರ್ನಮೆಂಟ್ ಗೆ ತೆರೆ ಬಿದ್ದಿದೆ. ಬೆಂಗಳೂರಿನ ಹೊಸಹಳ್ಳಿ ಫ್ಯಾಂಟಮ್ ನಾಡಪ್ರಭು ಕ್ರಿಕೆಟ್ ಮೈದಾನದಲ್ಲಿ ಆಗಸ್ಟ್ 10 ರಿಂದ 15ರವೆಗೆ ಒಟ್ಟು ಆರು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಸನ್ ನಾಯಕತ್ವದ ಶ್ರೀಲಂಕಾ ಲಾಯರ್ಸ್ ತಂಡ ಕಪ್ ಎತ್ತಿ ಹಿಡಿದಿದೆ. ಲೂಸ್ ಮಾದ ಯೋಗಿ ನಾಯಕತ್ವದ GLR ವಾರಿಯರ್ಸ್ ತಂಡ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ.

ಕುಲುನು ರಾಡಿಗೋ ಅತ್ಯುತ್ತಮ ಬೌಲರ್ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಅಕ್ಕಿಲ ಜಯಸುಂದ್ರ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಮೂಲಕ ಕಾರ್ ಪಡೆದುಕೊಂಡಿದ್ದಾರೆ. ಪೃಥ್ವಿ ದ್ರಾವಿಡ್ ಅತ್ಯುತ್ತಮ ಬಾಟ್ಸಮನ್ ಆರೆಂಜ್ ಕ್ಯಾಪ್ ಪ್ರಶಸ್ತಿಗೆ ಮುತ್ತಿಟ್ಟು ಬೈಕ್ ಗೆದಿದ್ದಾರೆ. IPT12 ಟೂರ್ನಮೆಂಟ್ ನಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿದ್ದವು.

ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಫ್ಯಾಷನ್ ಡಿಸೈನರ್ ಹೀಗೆ ಎಲ್ಲಾ ಕ್ಷೇತ್ರದವರು ಬ್ಯಾಟು ಬಾಲ್ ಹಿಡಿದು ಕ್ರಿಕೆಟ್ ಅಂಗಳಕ್ಕೆ ಧುಮುಕಿದ್ದರು. ಎನ್ 1 ಕ್ರಿಕೆಟ್ ಅಕಾಡೆಮಿ ಸಂಸ್ಥಾಪಕ ಸುನಿಲ್ ಕುಮಾರ್ ಬಿ ಆರ್ ನೇತೃತ್ವದಲ್ಲಿ IPT12 ಅದ್ದೂರಿಯಾಗಿ ನಡೆದಿದೆ.

IPT 12

IPT12 ನಲ್ಲಿ ಭಾಗಿಯಾಗಿದ್ದ ತಂಡಗಳ ಪಟ್ಟಿ

  1. GLR ವಾರಿಯರ್ಸ್
    ಲೂಸ್ ಮಾದ ಯೋಗಿ -ನಾಯಕ
    ರಾಜೇಶ್.ಎಲ್-ಮಾಲೀಕರು
  2. ಅಶ್ವಸೂರ್ಯ ರೈಡರ್ಸ್
    ಹರ್ಷ ಸಿಎಂ ಗೌಡ – ನಾಯಕ
    ರಂಜಿತ್ ಕುಮಾರ್ ಎಸ್ – ಮಾಲೀಕರು
  3. ದಿ ಬುಲ್ ಸ್ಕ್ವಾಡ್
    ಶರತ್ ಪದ್ಮನಾಭ್- ನಾಯಕ
    ಮೋನಿಶ್- ಮಾಲೀಕರು
  4. ಬಯೋಟಾಪ್ ಲೈಫ್ ಸೆವಿಯರ್ಸ್
    ಅಬ್ರಾರ್ ಮೊಹಮ್ಮದ್-ನಾಯಕ
    ಪ್ರಸನ್ನ ವಿ, ಡಾ.ವಿಶ್ವನಾಥ್
    ವಿನು ಜೋಸ್ -ಮಾಲೀಕರು
  5. ಶ್ರೀಲಂಕಾ ಲಾಯರ್ಸ್ ಕ್ರಿಕೆಟ್
    ಕುಸನ್-ನಾಯಕ
    ಮನೀಶ್ – ಅಧ್ಯಕ್ಷರು
    ಬುವನೇಕ – ಉಪಾಧ್ಯಕ್ಷ
  6. S/ o ಮುತ್ತಣ್ಣ ಟೀಮ್ ಮೀಡಿಯ
    ಸದಾಶಿವ ಶೆಣೈ-ನಾಯಕ
    ಪುರಾತನ‌‌ ಫಿಲ್ಮಂಸ್-ಮಾಲೀಕರು
  7. ಭಾರತೀಯ ವಕೀಲರ ತಂಡ
    ಅರವಿಂದ್ ವೆಂಕಟೇಶ್ ರೆಡ್ಡಿ-ನಾಯಕ
    ಶೈಲೇಶ್ ಕುಮಾರ್ -ಮಾಲೀಕರು
  8. ಫ್ಯಾಶನ್ ಮೇವರಿಕ್ಸ್
    ಫಹೀಮ್ ರಾಜ – ನಾಯಕ
    ಪ್ರಶಾಂತ್ ಕೆ ಎಂ – ಮಾಲೀಕರು

ಎವಿಆರ್ ಗ್ರೂಪ್ಸ್ ವತಿಯಿಂದ ಎಚ್ ವೆಂಕಟೇಶ್ ರೆಡ್ಡಿರವರು IPT12 ಕ್ರಿಕೆಟ್ ಟೂರ್ನಮೆಂಟ್ಗೆ ಟೈಟಲ್ ಸ್ಪಾನ್ಸರ್ ಮಾಡಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!