Gowri Movie Review: ಸಿಂಗರ್ ನ ಬದುಕಿನ ‘ಗೌರಿ’

ಚಿತ್ರ: ಗೌರಿ
ನಿರ್ದೇಶನ ಹಾಗೂ ನಿರ್ಮಾಣ: ಇಂದ್ರಜಿತ್ ಲಂಕೇಶ್
ತಾರಾಗಣ: ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಸಂಪತ್ ಮೈತ್ರೆಯ, ಮಾನಸಿ ಸುಧೀರ್, ಸಿಹಿ ಕಹಿ ಚಂದ್ರು ಇತರರು
ರೇಟಿಂಗ್: 4

ಹಳ್ಳಿಯಲ್ಲಿ ಬಡತನದಲ್ಲಿ ಹುಟ್ಟಿದ ಹುಡುಗನೊಬ್ಬ ಬೆಂಗಳೂರಿಗೆ ಬಂದು ಹೇಗೆ ಗಾಯಕ ಆಗುತ್ತಾನೆ? ಅವನ ಬದುಕು ಮುಂದೇನಾಗುತ್ತದೆ ಎನ್ನುವುದು ಗೌರಿ ಚಿತ್ರದ ಒನ್ ಲೈನ್ ಕಥೆ.

ಸಿಂಗರ್ ಆಗಲು ಹೊರಡುವ ನಾಯಕನಿಗೆ ಬೆಂಗಳೂರಿನಲ್ಲಿ ಸಂಗೀತದ ಮೇಲೆ ಆಸಕ್ತಿ ಇರುವ ಚೆಲುವೆ ಸಹಾಯ ಮಾಡುತ್ತಾಳೆ. ಮುಂದೆ ಅವಳ ಜೊತೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ರಿಯಾಲಿಟಿ ಶೋ ವೇದಿಕೆಯಲ್ಲಿ ಅವಕಾಶ ಪಡೆಯುವ ನಾಯಕನ ಬದುಕಿನಲ್ಲಿ ಮುಂದೇನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.

ನಿರ್ದೇಶಕರು ಚಿತ್ರದಲ್ಲಿ ಸಾಮಾಜಿಕ ಸಂದೇಶವನ್ನು ಹೇಳುವ ಯತ್ನವನ್ನು ಮಾಡಿದ್ದಾರೆ. ವಿಕಲಚೇತನ ವ್ಯಕ್ತಿಯ ಕಥೆ ಎಮೋಷನಲ್ ಆಗಿದೆ. ತಾಯಿ ಸೆಂಟಿಮೆಂಟ್ ಇಲ್ಲಿದೆ. ಆಕ್ಷನ್ ಕೂಡ ಚಿತ್ರದಲ್ಲಿದೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ತಮ್ಮ ಮಗನ ಪ್ರತಿಭಾ ಪ್ರದರ್ಶನಕ್ಕೆ ಗೌರಿ ಚಿತ್ರವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಅಭಿನಯದಲ್ಲಿ, ಡಾನ್ಸ್, ರೋಮ್ಯಾನ್ಸ್, ಎಮೋಷನಲ್ ಹೀಗೆ ಸಮರ್ಜಿತ್ ತಮ್ಮ ಮೊದಲ ಚಿತ್ರದಲ್ಲಿ ನಟನೆಯ ಬಹುತೇಕ ವಿಭಾಗಗಳಲ್ಲಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಈ ಚಿತ್ರ ಸಮರ್ಜಿತ್ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿದೆ.

ಸಮರ್ಜಿತ್ ಜೋಡಿಯಾಗಿ ನಟಿಸಿರುವ ಸಾನ್ಯಾ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ನಾಯಕ ಹಾಗೂ ನಾಯಕಿಯ ರೋಮ್ಯಾಂಟಿಕ್ ದೃಶ್ಯಗಳು ಹೈಲೈಟ್ ಆಗಿವೆ. ಲೂಸ್ ಮಾದ ಯೋಗಿ, ಪ್ರಿಯಾಂಕ ಉಪೇಂದ್ರ, ರಿಕ್ಕಿ ಕೇಜ್, ವಸುಂದರಾ ದಾಸ್ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕುಲ್ ಬಾಲಾಜಿ ಈ ಸಿನಿಮಾದಲ್ಲಿ ಕೂಡ ನಿರೂಪಕನ ಪಾತ್ರದಲ್ಲಿ ನಟಿಸಿದ್ದಾರೆ.

ಮೇಕಿಂಗ್ ವಿಚಾರದಲ್ಲಿ ಹೊಸತನ ಬೇಕು ಎಂದು ಅನಿಸುತ್ತದೆ. ಕಾಮಿಡಿ ದೃಶ್ಯಗಳು ನಗಿಸುವಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿವೆ. ಕಥೆಯಲ್ಲಿ ಹಾಡುಗಳಿಗೆ ಮಹತ್ವ ಇದ್ದರೂ ಹಾಡುಗಳ ವಿಚಾರದಲ್ಲಿ ಚಿತ್ರ ಡಲ್ ಆದಂತೆ ಅನಿಸುತ್ತದೆ. ಚಿಕ್ಕ ನೆಗೆಟಿವ್ ಅಂಶಗಳು ಇದ್ದರೂ, ಹೊಸ ನಾಯಕ, ನಾಯಕಿಯ ಚಿತ್ರವಾಗಿ ಗೌರಿ ಗಮನ ಸೆಳೆಯುತ್ತದೆ.

ಗೌರಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!