ಆಗಸ್ಟ್ 17ಕ್ಕೆ ‘ಜಂಬೂ ಸರ್ಕಸ್’ ಸಾಂಗ್ ರಿಲೀಸ್

ಜಂಬೂ ಸರ್ಕಸ್’ ಚಿತ್ರದ ಲಿರಿಕಲ್ ಹಾಡು ಆಗಸ್ಟ್ 17ಕ್ಕೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗೂ ಅಂಜಲಿ ಅನೀಶ್ ಪ್ರಮುಖ ಪಾತ್ರದಲ್ಲಿದ್ದಾರೆ.

ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ನಲ್ಲಿ ಎಚ್ ಸಿ ಸುರೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಸ್ವಾತಿ, ಲಕ್ಷ್ಮಿ ಸಿದ್ದಯ್ಯ, ನಯನಾ, ಜಗಪ್ಪ ಪ್ರಮುಖ ಪಾತ್ರದಲ್ಲಿದ್ದಾರೆ.

ಚಿತ್ರಕ್ಕೆ ಜ್ಞಾನೇಶ್ ಮಾತಾಡ್ ಸಂಕಲನ, ಏ ವಿ ಕೃಷ್ಣಕುಮಾರ್ ಛಾಯಾಗ್ರಾಹಣ, ರಘು ನಿಡವಳ್ಳಿ ಸಂಭಾಷಣೆ ಹಾಗೂ ಎ ಹರ್ಷ ನೃತ್ಯ ನಿರ್ದೇಶನವಿದೆ.

‘ಜಿಗರ್’ ನಲ್ಲಿ ಮಾಸ್ ಹೀರೋ ಆಗಿ ಮಿಂಚಿದ್ದ ಪ್ರವೀಣ್ ತೇಜ್ ‘ಜಂಬೂ ಸರ್ಕಸ್’ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

____

Be the first to comment

Leave a Reply

Your email address will not be published. Required fields are marked *

Translate »
error: Content is protected !!