ಹಿಂದಿ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ನಟನೆ

ಕನ್ನಡದ ಖ್ಯಾತ ನಿರ್ದೇಶಕ ರಾಜ್‌ ಬಿ ಶೆಟ್ಟಿ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ.

ಹಿಂದಿ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಕ್ಯಾಮಿಯೋ ಪಾತ್ರದಲ್ಲಿ ನಟಿಸಲಿದ್ದಾರೆ. ಮಲಯಾಳಂನ ಖ್ಯಾತ ನಟ ಜೋಜು ಜಾರ್ಜ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಥ್ರಿಲ್ಲರ್‌ ಸಿನಿಮಾದಲ್ಲಿ ಬಾಬಿ ಡಿಯೋಲ್ ಕೂಡ ಇದ್ದಾರೆ.

ಅನುರಾಗ್‌ ಕಶ್ಯಪ್‌ ನಿರ್ದೇಶನದ ಸಿನಿಮಾ ಕುರಿತು ರಾಜ್‌ ಬಿ ಶೆಟ್ಟಿ ಮಾತನಾಡಿ, ‘ನಾನು ಅನುರಾಗ್‌ ಕಶ್ಯಪ್‌ ಸಿನಿಮಾಗಳನ್ನು ನೋಡಿ ಬೆಳೆದವನು. ನನಗೆ ಅವರ ಸಿನಿಮಾಗಳು ಇಷ್ಟ. ಕ್ಯಾಮಿಯೋ ಪಾತ್ರದಲ್ಲಿ ನಟಿಸುತ್ತೀಯಾ ಎಂದು ಕೇಳಿದರು. ನಾನು ಒಪ್ಪಿದೆʼʼ ಎಂದಿದ್ದಾರೆ.

ಹೊಸ ಸಿನಿಮಾದ ಶೀರ್ಷಿಕೆ ಮತ್ತಿತರ ವಿವರಗಳನ್ನು ಅನುರಾಗ್‌ ಕಶ್ಯಪ್‌ ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.

ದುನಿಯಾ ವಿಜಯ್‌ ನಟನೆಯ ‘ವಿಕೆ 29’ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ನಟಿಸುವುದು ಖಚಿತವಾಗಿದೆ. ಜಡೇಶ್ ಹಂಪಿ ನಿರ್ದೇಶನದ ಈ ಸಿನಿಮಾ ಶಿವರಾಮ ಕಾರಂತರ ‘ಚೋಮನ ದುಡಿ’ಯಿಂದ ಪ್ರೇರಣೆ ಪಡೆದಿದೆ. ದುನಿಯಾ ವಿಜಯ್ 29ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು.

ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!