ರೋಹಿತ್

ರಕ್ತಾಕ್ಷ ಗೆಲುವಿನಿಂದ ರೋಹಿತ್ ಗೆ ಆಫರ್

ರಕ್ತಾಕ್ಷ ಚಿತ್ರದ ಗೆಲುವಿನಿಂದ ನಾಯಕ ನಟ ರೋಹಿತ್ ಅವರಿಗೆ ಹೊಸ ಆಫರ್ ಗಳು ಬರುತ್ತಿವೆ. ಜುಲೈ ತಿಂಗಳಿನಲ್ಲಿ ರಕ್ತಾಕ್ಷ ಚಿತ್ರ ತೆರೆಗೆ ಬಂದಿತ್ತು. ಉತ್ತರ ಕರ್ನಾಟಕದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ಮೂರನೇ ವಾರ ಪೂರೈಸುತ್ತಿದೆ. ಈ ನಡುವೆ ರೋಹಿತ್ ಅವರಿಗೆ ಹೊಸ ಚಿತ್ರಗಳಲ್ಲಿ ನಟಿಸಲು ಮೂರು ಆಫರ್ ಗಳು ಬಂದಿವೆ.

ತಮ್ಮದೇ ಪ್ರೊಡಕ್ಷನ್ ನಲ್ಲಿ ರಕ್ತಾಕ್ಷ2 ಚಿತ್ರ ಮೂಡಿ ಬರಲಿದೆ. ಇದಲ್ಲದೇ ಕ್ರೀಡಾ ಕಥೆಯ ಚಿತ್ರದಲ್ಲಿ ರೋಹಿತ್ ನಾಯಕನಾಗಿ ನಟಿಸಲಿದ್ದಾರೆ.

ರಕ್ತಾಕ್ಷ ಚಿತ್ರ ಒಳ್ಳೆಯ ಅನುಭವವನ್ನು ನೀಡಿದೆ ಎನ್ನುವ ರೋಹಿತ್ ಪೂರ್ಣ ಪ್ರಮಾಣದ ನಟನಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ರಕ್ತಾಕ್ಷ ಚಿತ್ರದಿಂದ ಏನು ಮಾಡಬಾರದು, ಏನು ಮಾಡಬೇಕು ಎನ್ನುವುದು ಸರಿಯಾಗಿ ಗೊತ್ತಾಗಿದೆ ಎಂದು ಹೇಳಿದ್ದಾರೆ.

ರಕ್ತಾಕ್ಷ ಚಿತ್ರಕ್ಕೆ ಬೇಡಿಕೆ ಬರುತ್ತಿದ್ದು, OTT ಹಾಗೂ ಡಬ್ಬಿಂಗ್ ಹಕ್ಕುಗಳ ಮಾರಾಟದ ಬಗ್ಗೆ ಮಾತುಕತೆ ನಡೆಯುತ್ತಿದೆ.

ರೋಹಿತ್

Be the first to comment

Leave a Reply

Your email address will not be published. Required fields are marked *

Translate »
error: Content is protected !!