ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್?

ಒಂಟಿಯಾಗಿರುವ ನಟಿ ಸಮಂತಾ ನಿರ್ದೇಶಕನ ಜೊತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದೆ.

ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದ ನಾಲ್ಕೇ ವರ್ಷಕ್ಕೆ ದೂರ ದೂರವಾಗಿದ್ದರು. ಇಂದಿಗೂ ಇಬ್ಬರು ದೂರವಾಗಲು ಕಾರಣ ಮಾತ್ರ ಸ್ಪಷ್ಟವಾಗಿಲ್ಲ. ಈ ಮಧ್ಯೆ ನಾಗಚೈತನ್ಯ ನಟಿ ಶೋಭಿತಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಅತ್ತ ಸಮಂತಾ, ನಿರ್ದೇಶಕ ರಾಜ್​​ ನಿಡಿಮೋರ್​ ಜೊತೆಗೆ ಡೇಟ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೆಬ್​ ಸೀರಿಸ್​​ನಲ್ಲಿ ಜೊತೆಯಾದ ನಂತರದಿಂದ ಸಮಂತಾ, ರಾಜ್​​ ನಿಡಿಮೋರ್​ ಜೊತೆಗೆ ಡೇಟ್​ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. 

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸಿನಿಮಾದಲ್ಲಿ ಅಸಾಧಾರಣ ಅಭಿನಯಕ್ಕಾಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದರು. ಹನಿ ಬನ್ನಿಯಲ್ಲಿ ರಾಜ್​ ನಿಡಿಮೋರ್​ ಪರಿಚಯವಾಗಿ ಸದ್ಯ ಡೇಟ್​ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.  ರಾಜ್​ಗೆ ಈಗಾಗಲೇ ಮದುವೆಯಾಗಿದೆ. ಹೀಗಾಗಿ ಡೇಟಿಂಗ್ ಸುದ್ದಿಗೆ ಸ್ಪಷ್ಟನೆ ಸಿಗುವವರೆಗೂ ಕಾಯಬೇಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!