ಚಿತ್ರ: ಭೀಮ
ನಿರ್ದೇಶನ: ದುನಿಯಾ ವಿಜಯ್
ತಾರಾಬಳಗ: ದುನಿಯಾ ವಿಜಯ್, ಅಶ್ವಿನಿ, ಅಚ್ಚುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು, ಕಾಕ್ರೋಚ್ ಸುಧಿ ಇತರರು
ರೇಟಿಂಗ್: 4/5
ಬೆಂಗಳೂರಿನಲ್ಲಿ ನೆಲೆಯೂರಿರುವ ಡ್ರಗ್ಸ್ ಮಾಫಿಯವನ್ನು ಸದೆ ಬಡಿಯಲು ಹೋರಾಡುವ ನಾಯಕನ ಕಥೆಯನ್ನು ಹೊಂದಿರುವ ಚಿತ್ರ ಭೀಮ.
ಈ ವಾರ ತೆರೆಗೆ ಬಂದಿರುವ ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಯುವ ಜನಾಂಗ ಡ್ರಗ್ಸ್ ದಂಧೆಯಿಂದ ಹಾಳಾಗುತ್ತಿರುವ ಚಿತ್ರಣವನ್ನು ಕಟ್ಟಿ ಕೊಟ್ಟಿದ್ದಾರೆ. ಇದರ ಜೊತೆಗೆ ಡ್ರಗ್ಸ್ ಮಾಫಿಯಾ ತಡೆಗಟ್ಟುವ ಬಗ್ಗೆ ಸಂದೇಶವನ್ನು ನೀಡುವ ಯತ್ನವನ್ನು ಮಾಡಿದ್ದಾರೆ.
ಚಿತ್ರದಲ್ಲಿ ವಿಜಯ್ ಅವರು ಬೆಂಗಳೂರಿನ ಸ್ಲಂ ಗಳ ಚಿತ್ರಣ ನೀಡುವ ಜೊತೆಗೆ ಅಲ್ಲಿನ ವ್ಯಸನವನ್ನು ಹಸಿಯಾಗಿ ತೆರೆಯ ಮುಂದೆ ತಂದಿಟ್ಟಿದ್ದಾರೆ. ಸ್ಲಂನ ದೃಶ್ಯಗಳ ಜೊತೆಗೆ ಸಂಭಾಷಣೆ ಕೂಡ ಸ್ಲಂ ಮಟ್ಟದಲ್ಲಿದೆ. ಚಿತ್ರದಲ್ಲಿ ಕ್ರೌರ್ಯ, ರಕ್ತಪಾತ ಜೋರಾಗಿ ನಡೆದಿದೆ. ಕುಟುಂಬ ಸಮೇತ ಚಿತ್ರವನ್ನು ನೋಡುವುದು ಸ್ವಲ್ಪ ಕಷ್ಟ ಅನಿಸುತ್ತದೆ.
ದುನಿಯಾ ವಿಜಯ್ ಡ್ರಗ್ಸ್ ಮಾಫಿಯವನ್ನು ಮೆಟ್ಟಿ ನಿಲ್ಲುವ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ವಿಜಯ್ ಹೊಡೆದಾಟ ಜೋರಾಗಿದೆ. ಅಶ್ವಿನಿ ಚಿಕ್ಕ ಪಾತ್ರದಲ್ಲಿ ಮಿಂಚಿದ್ದಾರೆ. ಅಚ್ಚುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಕಾಕ್ರೋಚ್ ಸುಧಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಬೆಂಗಳೂರಿನ ಸ್ಲಂಗಳನ್ನು ಅಚ್ಚುಕಟ್ಟಾಗಿ ಶಿವಸೇನಾ ಸೆರೆ ಹಿಡಿದಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ದುನಿಯಾ ವಿಜಯ್ ಅಭಿಮಾನಿಗಳಿಗೆ ಚಿತ್ರ ಖುಷಿ ನೀಡುವಂತಿದೆ. ಮಾಸ್ ಚಿತ್ರ ಆಗಿರುವ ಭೀಮ ಪ್ರೇಮಿಗಳಿಗೆ ಕೂಡ ಇಷ್ಟ ಆಗಬಹುದು.
___
Be the first to comment