ಫಹಾದ್ ಫಾಸಿಲ್ ಪೋಸ್ಟರ್​ ರಿಲೀಸ್

ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾ ಟೀಮ್​, ಪ್ಯಾನ್​ ಇಂಡಿಯಾ ಸ್ಟಾರ್​  ಫಹಾದ್ ಫಾಸಿಲ್​ ಅವರ ಪೋಸ್ಟರ್​ ಅನಾವರಣ ಮಾಡಿದೆ.

ಫಹಾದ್​ ಫಾಸಿಲ್ ಜನ್ಮದಿನದ ಪ್ರಯುಕ್ತ  ಪೋಸ್ಟರ್​ ಅನಾವರಣ ಆಗಿದೆ. ‘ಪುಷ್ಪ 2’ ಚಿತ್ರದಲ್ಲಿ ಬನ್ವರ್​ ಸಿಂಗ್​ ಶೆಕಾವತ್​ ಎಂಬ ಪಾತ್ರವನ್ನು ಫಹಾದ್​ ಫಾಸಿಲ್​ ಮಾಡುತ್ತಿದ್ದಾರೆ. ಫಹಾದ್​ ಅವರ ಲುಕ್​ ಸೂಪರ್​ ಆಗಿದೆ. ಗನ್​, ಕೊಡಲಿ ಹಿಡಿದು ಫಹಾದ್​ ಪಾಸಿಲ್​ ಪೋಸ್​ ನೀಡಿದ್ದಾರೆ. ಚಿತ್ರದಲ್ಲಿ ಫಹಾದ್​ ಫಾಸಿಲ್​ ಅವರು ಮುಖ್ಯ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿರುವ ‘ಪುಷ್ಪ 2’ ಸಿನಿಮಾಗೆ ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್​ ವೇಳೆಗೆ ಈ ಚಿತ್ರದ ಶೂಟಿಂಗ್​ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ರಾವ್​ ರಮೇಶ್​, ಪ್ರಕಾಶ್ ರಾಜ್​, ಜಗಪತಿ ಬಾಬು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಶೂಟಿಂಗ್​ ವಿಳಂಬವಾದ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಡಿಸೆಂಬರ್​ 6ರಂದು  ಸಿನಿಮಾ ಬಿಡುಗಡೆ ಆಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!