‘ಬಿಗ್ ಬಾಸ್ ಕನ್ನಡ’ ಆಫರ್ ತಿರಸ್ಕರಿಸಿದ ನಟಿ

ಟಾಲಿವುಡ್ ನಲ್ಲಿ ಮಿಂಚುತ್ತಿರುವ  ನಟಿ ಜ್ಯೋತಿ ರೈ ಅವರಿಗೆ ಬಿಗ್ ಬಾಸ್ ಕನ್ನಡ ಆಫರ್ ನೀಡಿದೆ. ಆದರೆ ಜ್ಯೋತಿ ರೈ ಈ ಅವಕಾಶವನ್ನು ತಿರಸ್ಕರಿಸಿದ್ದಾರೆ.

ಈ ವಿಚಾರವನ್ನು ಸ್ವತಃ ಜ್ಯೋತಿ ರೈ ತಿಳಿಸಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ  ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.  ಸೀರಿಯಲ್​ಗಳಲ್ಲಿ ನಟಿಸಿ ಜ್ಯೋತಿ ರೈ  ಫೇಮಸ್​ ಆಗಿದ್ದಾರೆ.  ಬಿಗ್​ ಬಾಸ್​ ಸೀಸನ್​ಗಳಲ್ಲಿ ಕಿರುತೆರೆಯ ಅನೇಕ ಸೆಲೆಬ್ರಿಟಿಗಳಿಗೆ ಅವಕಾಶ ಸಿಕ್ಕಿತ್ತು. ಈ ಬಾರಿಗೂ ಸಿನಿಮಾ, ಸೀರಿಯಲ್​, ಸೋಶಿಯಲ್​ ಮೀಡಿಯಾದಲ್ಲಿ ಜನಪ್ರಿಯತೆ ಇರುವವರಿಗೆ ಮಣೆ ಹಾಕಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜ್ಯೋತಿ ರೈ ಅವರಿಗೂ ಆಫರ್​ ನೀಡಲಾಗಿದೆ ಎಂಬ ಮಾಹಿತಿ  ಬಹಿರಂಗ ಆಗಿದೆ.

‘ನಾನು ಕನ್ನಡ ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಅನೇಕರು ವಿಚಾರಿಸುತ್ತಿದ್ದಾರೆ. ನನಗೆ ಬಿಗ್​ ಬಾಸ್​ ತಂಡದಿಂದ ಆಫರ್​ ಬಂದಾಗ ನಾನು ಅದನ್ನು ಗೌರವದಿಂದ ತಿರಸ್ಕರಿಸಿದೆ. ಈ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣಗಳಿಂದ ಈ ನಿರ್ಧಾರ ತೆಗೆದುಕೊಂಡೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಚಿರಋಣಿ’ ಎಂದು ಜ್ಯೋತಿ ರೈ  ಬರೆದುಕೊಂಡಿದ್ದಾರೆ.

ಒಂದಷ್ಟು ದಿನಗಳ ಹಿಂದೆ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಖಾಸಗಿ ವಿಡಿಯೋಗಳು ವೈರಲ್​ ಆಗಿದ್ದವು. ಆದರೆ ಅವು ತಮ್ಮ ವಿಡಿಯೋ ಅಲ್ಲ ಎಂದು ಜ್ಯೋತಿ ಅವರು ಸ್ಪಷ್ಟನೆ ನೀಡಿ ಮಾನಹಾನಿಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ದ್ಯದಲ್ಲೇ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕಂಟೆಸ್ಟೆಂಟ್ ಗಳನ್ನು ಹುಡುಕಲಾಗುತ್ತಿದೆ.  ರಿಯಲ್ ಲೈಫ್ ನಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರನ್ನು ಹುಡುಕಿ ಕರೆತರಲಾಗುತ್ತಿದೆ. ಆದರೆ ಜ್ಯೋತಿ ರೈ ಈ ಅವಕಾಶವನ್ನು ಒಪ್ಪಿಕೊಂಡಿಲ್ಲ.

ಎರಡು ದಿನಗಳ ಹಿಂದೆ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದರು. ನಟಿ ಅದರಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.

 

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!