Skip to content
ನವೆಂಬರ್ 1 ರಿಂದ ಚಿತ್ರೀಕರಣ ಬಂದ್ ಮಾಡುವ ನಿರ್ಣಯವನ್ನು ತಮಿಳು ಚಿತ್ರರಂಗದ ನಿರ್ಮಾಪಕರು ತೆಗೆದುಕೊಂಡಿದ್ದಾರೆ.
ಭಾರತದ ಮೂರನೇ ಅತಿ ದೊಡ್ಡ ಚಿತ್ರರಂಗವಾಗಿರುವ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಭೆ ನಡೆಸಿದ ತಮಿಳು ಚಿತ್ರರಂಗದ ನಿರ್ಮಾಪಕರು ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ನವೆಂಬರ್ 1 ರಿಂದ ಚಿತ್ರೀಕರಣ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಈ ಬಗ್ಗೆ ನಡೆದ ಸಭೆಯಲ್ಲಿ ತಮಿಳುನಾಡು ಸಿನಿಮಾ ನಿರ್ಮಾಪಕರ ಸಂಘ, ತಮಿಳುನಾಡು ಸಿನಿಮಾ ಪ್ರದರ್ಶಕರ ಸಂಘ, ತಮಿಳುನಾಡು ಸಿನಿಮಾ ವಿತರಕರ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಪ್ರತಿಯೊಂದು ಸಂಘಟನೆಯೂ ತಾವು ಚಿತ್ರರಂಗದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು.
ಯಾವುದೇ ದೊಡ್ಡ ನಟನ ಸಿನಿಮಾಗಳು ಚಿತ್ರರಂಗದಲ್ಲಿ ಬಿಡುಗಡೆ ಆದ ಎರಡು ತಿಂಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕು. ಯಾವುದೇ ಸ್ಟಾರ್ ನಟ ಒಂದು ಸಿನಿಮಾಕ್ಕೆ ಅಡ್ವಾನ್ಸ್ ಪಡೆದರೆ ಆ ಸಿನಿಮಾ ಮುಗಿಯುವವರೆಗೂ ಹೊಸ ಸಿನಿಮಾದ ಅಡ್ವಾನ್ಸ್ ಪಡೆಯುವಂತಿಲ್ಲ. ಸಿನಿಮಾ ನಟರ ಸಿಬ್ಬಂದಿಯ ಖರ್ಚನ್ನು ನಟರೇ ಭರಿಸಬೇಕು. ಹೊಸ ತಮಿಳು ಸಿನಿಮಾಗಳ ಬಿಡುಗಡೆ ಬಗ್ಗೆ ಹೊಸ ನಿಯಮಗಳನ್ನು ಜಾರಿ ಮಾಡಬೇಕು. ಆಗಸ್ಟ್ 16 ರಿಂದ ವಾರಕ್ಕೆ ಇಂತಿಷ್ಟೆ ಸಿನಿಮಾಗಳು ಬಿಡುಗಡೆ ಆಗಬೇಕೆಂಬ ನಿಯಮ ಜಾರಿ ಆಗಬೇಕು ಎಂದು ಚರ್ಚೆ ನಡೆಸಿತು.
ಸಿನಿಮಾದ ಮುಖ್ಯ ನಟರ ಸಂಭಾವನೆ ಭಾರಿ ಏರಿಕೆ ಆಗಿದ್ದು, ನಟರ ಸಂಭಾವನೆ ಇಳಿಕೆ ಆಗಬೇಕು. ಈಗ ಚಾಲ್ತಿಯಲ್ಲಿರುವ ದೊಡ್ಡ ಸಿನಿಮಾಗಳ ಚಿತ್ರೀಕರಣ ಅಕ್ಟೋಬರ್ 30ಕ್ಕೆ ಬಹುತೇಕ ಅಂತ್ಯವಾಗಲಿದೆ. ಅದಾದ ಬಳಿಕ ನವೆಂಬರ್ 1 ರಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿತ್ರರಂಗ ಬಂದ್ ಮಾಡುವ ನಿರ್ಧಾರವನ್ನು ನಿರ್ಮಾಪಕರು ಪ್ರಕಟಿಸಿದ್ದಾರೆ.
—–
Post Views:
140
Translate »
error: Content is protected !!
Be the first to comment