ನಿರ್ದೇಶಕ: ವಾಸುದೇವ ಎಸ್ ಎನ್
ನಿರ್ಮಾಣ: ರೋಹಿತ್
ತಾರಾ ಬಳಗ: ರೋಹಿತ್, ವಸಿಷ್ಠ ಸಿಂಹ, ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ, ಪ್ರಮೋದ್ ಶೆಟ್ಟಿ ಇತರರು…
ರೇಟಿಂಗ್: 3.5/5
ಸೇಡಿನ ಕಥೆ ಹೊಂದಿರುವ ಸರಣಿ ಕೊಲೆಯ ಸಸ್ಪೆನ್ಸ್ ಚಿತ್ರ ಈ ವಾರ ತೆರೆಗೆ ಬಂದಿರುವ ರಾಕ್ತಾಕ್ಷ ಸಿನಿಮಾ.
ಸೋಶಿಯಲ್ ಮೀಡಿಯಾ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಯಾವ ರೀತಿ ಮೋಸ ಮಾಡಲಾಗುತ್ತದೆ ಹಾಗೂ ಅದರಿಂದ ಆಗುವ ಅನಾಹುತಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಚಿತ್ರದಲ್ಲಿ ಹೊಸ ಮಾಫಿಯಾ ಒಂದರ ಬಗ್ಗೆ ಹೇಳಲಾಗಿದೆ. ಚಿತ್ರದ ನಾಯಕ ಸರಣಿ ಹಂತಕನಾ? ವಿಲನ್ನಾ? ಅಥವಾ ಹೀರೋನಾ ಎಂದು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.
ಉತ್ತರ ಕರ್ನಾಟಕದ ಪ್ರತಿಭೆ ರೋಹಿತ್ ತಮ್ಮ ಮೊದಲ ಪ್ರಯತ್ನದಲ್ಲಿ ಗಮನ ಸೆಳೆದಿದ್ದಾರೆ. ಹೊಡೆದಾಟದಲ್ಲಿ ಅವರು ಸಲೀಸಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನಟನೆಯಲ್ಲಿ ಇನ್ನೂ ಪಕ್ವತೆ ಬೇಕಿದೆ. ನಾಯಕಿಯರಾಗಿ ಕಾಣಿಸಿಕೊಂಡಿರುವ ರಚನಾ ದಶರತ್, ಅರ್ಚನಾ ಕೊಟ್ಟಿಗೆ, ರೂಪ ರಾಯಪ್ಪ ಅವರಿಗೆ ಹೆಚ್ಚು ಕೆಲಸವಿಲ್ಲ. ಒಂದೆರಡು ದೃಶ್ಯಗಳ ನಂತರ ಸಾಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಗುರುದೇವ್ ನಾಗರಾಜ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ.
ಚಿತ್ರ ಎಂದರೆ ಎರಡನೇ ಭಾಗ ಮಾಡಬಹುದು ಎನ್ನುವ ಸಂದೇಶವನ್ನು ಸಿನಿಮಾದ ಅಂತ್ಯದಲ್ಲಿ ಕೊಡಲಾಗಿದೆ. ನಾಯಕ, ಖಳನಾಯಕನನ್ನು ಮುಗಿಸುತ್ತಿದ್ದಂತೆಯೇ ಇನ್ನೊಬ್ಬ ಬೆಳೆದು ನಿಂತಿದ್ದಾನೆ. ಅವನ ವಿರುದ್ಧ ನಾಯಕ ತೊಡೆ ತಟ್ಟುತ್ತಾನಾಎನ್ನುವುದಕ್ಕೆ ಮುಂದಿನ ಚಿತ್ರದಲ್ಲಿ ನೋಡಬೇಕಿದೆ.
ಚಿತ್ರದ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದೆ. ಸೇಡಿನ ಕಥೆಯಾದ ಕಾರಣ ಸಿನಿಮಾದಲ್ಲಿ ಲೀಟರ್ ಗಟ್ಟಲೆ ರಕ್ತ ಹರಿದಿದೆ. ಇದನ್ನು ಸಹಿಸಿಕೊಳ್ಳುವುದು ಅನಿವಾರ್ಯ.
___
Be the first to comment