ನಿರ್ದೇಶನ: ಪ್ರವೀಣ ಅವ್ಯುಕ್ತ
ನಿರ್ಮಾಣ: ವಿಘ್ನೇಶ್ವರ, ವಿಜಯ್ ಕುಮಾರ್
ತಾರಾಗಣ: ರಾಜ ವರ್ಧನ್, ದಿವ್ಯಾ, ಅರವಿಂದ್, ಕಾರ್ತಿಕ್ ಇತರರು
ರೇಟಿಂಗ್: 3/5
ಹಿರಣ್ಯ ಎನ್ನುವ ಕ್ರಿಮಿನಲ್ ನ ಚಟುವಟಿಕೆಯ ವ್ಯಕ್ತಿಯು ಕಥೆ ಹೊಂದಿದ ಚಿತ್ರ ಈ ವಾರ ತೆರೆಗೆ ಬಂದಿರುವ ‘ ಹಿರಣ್ಯ ‘.
ಸುಪಾರಿ ಕೊಟ್ಟರೆ ಯಾವುದೇ ಕೆಲಸ ಮಾಡುವ ಹಿರಣ್ಯ ಮಗುವನ್ನು ಕಿಡ್ನಾಪ್ ಮಾಡಿ ಡಾನ್ ಕೈಗೆ ಕೊಡುವ ವೇಳೆ ತೆಗೆದುಕೊಡುವ ಟ್ವಿಸ್ಟ್ ಸಿನಿಮಾದ ಹೈಲೈಟ್.
ಹಿರಣ್ಯ ಪಾತ್ರದಲ್ಲಿ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಕಥೆ ಯಾವುದೇ ಕುತೂಹಲ ಇಲ್ಲದೆ ಹಾಗೇ ಸಾಗುತ್ತದೆ. ಮಗು ಹೀರೋ ಕೈಯಲ್ಲಿ ಸಿಕ್ಕಿಕೊಂಡ ಬಳಿಕ ಏನೆಲ್ಲ ಆಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ರಾಜವರ್ಧನ್ ಚಿತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ಲ್ಯಾಂಗ್ವೇಜ್ ಡೈಲಾಗ್ ಡೆಲಿವರಿ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ದಿವ್ಯ ಗ್ಲ್ಯಾಮರ್ ಆಗಿ ಕಾಣಿಸಿಕೊಂಡಿದ್ದು ಹಾಡೊಂದರಲ್ಲಿ ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.
ಮಗುವಿನ ತಾಯಿಯಾಗಿ ರಿಹಾನ ಉತ್ತಮವಾಗಿ ನಟಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ದಿಲೀಪ್ ಓಕೆ ಅನಿಸುತ್ತಾರೆ.
ಚಿತ್ರದ ಹಿನ್ನೆಲೆ ಸಂಗೀತ ಇನ್ನಷ್ಟು ಶಾರ್ಪ್ ಆಗಬೇಕಿತ್ತು. ಜ್ಯೂಡ್ ಸ್ಯಾಂಡಿ ಸಂಗೀತ ಓಕೆ ಅನಿಸುತ್ತದೆ. ಯೋಗೇಶ್ವರನ್ ಕ್ಯಾಮೆರಾ ಕೆಲಸ ಚೆನ್ನಾಗಿದೆ. ಚಿತ್ರದಲ್ಲಿ ಸ್ಟಂಟ್ ಗಮನ ಸೆಳೆಯುತ್ತದೆ. ಕಾರ್ ಚೇಸ್ ಪ್ರೇಕ್ಷಕರ ಮನಸು ಗೆಲ್ಲುತ್ತದೆ.
_____
Be the first to comment