‘ಭೀಮಾ’ ಚಿತ್ರದ ‘Boom Boom Bangalore’ ಸಾಂಗ್ ಜುಲೈ 19ಕ್ಕೆ ಅನಾವರಣಗೊಳ್ಳಲಿದೆ.
ಚರಣ್ ರಾಜ್ ಸಂಗೀತ ಸಂಯೋಜನೆಯ ಈ ಹಾಡಿನಲ್ಲಿ ನಾಗರಹೊಳೆ ಸಮೀಪದ ಬುಡಕಟ್ಟು ತಂಡದ 30 ಸದಸ್ಯರು ಹಾಡು ಹಾಡಿದ್ದಾರೆ. ಈ ಹಾಡು, ಅವರ ಆಡುಭಾಷೆಯಲ್ಲಿ, ಬೆಂಗಳೂರನ್ನು ಉಲ್ಲೇಖಿಸುತ್ತದೆ.ಈ ಹಿಂದೆ ‘ಸಲಗ’ ಚಿತ್ರದಲ್ಲಿ ಸಿದ್ದಿ ಜನಾಂಗದವರು ಹಾಡಿದ ‘ಟಿನಿಂಗ ಮಿಣಿಂಗ’ ಹಾಡು ಜನಪ್ರಿಯವಾಗಿತ್ತು. ಅದೇ ರೀತಿಯ ಹಾಡೊಂದು ‘ಭೀಮ’ ಚಿತ್ರದಲ್ಲೂ ಇದೆ.
‘ಈ ಬಾರಿ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರು ‘ಅಮ್ಮಾಳೆ’ ಎಂಬ ವಿಶೇಷ ಹಾಡು ಹಾಡಿದ್ದಾರೆ. ‘ಲೇ ಲೇ ಮುನ್ನ ಲೇ ಲೇ..ಬೂಮ್ ಬೂಮ್ ಬೆಂಗಳೂರು’ ಎಂಬ ಸಾಲುಗಳಿರುವ ಹಾಡಿನಲ್ಲಿ ಆ ಬುಡಕಟ್ಟು ಜನಾಂಗದವರು ಬೆಂಗಳೂರಿನ ಬಗ್ಗೆ ಹೇಳುವಂತಿದೆ. ಶೀಘ್ರದಲ್ಲೇ ಈ ಹಾಡನ್ನು ರಿಲೀಸ್ ಮಾಡಲಿದ್ದೇವೆ. ಇನ್ನೊಂದು ಎಮೋಷನಲ್ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ” ಎಂದು ನಿರ್ದೇಶಕ ವಿಜಯ್ ಕುಮಾರ್ ಹೇಳುತ್ತಾರೆ.
ಭೀಮಾ ಚಿತ್ರದಲ್ಲಿ ಯುವ ಪ್ರತಿಭೆ ಅಶ್ವಿನಿ, ವಿಜಯ್ ಜೊತೆಗೆ ನಟಿಸಿದ್ದಾರೆ. ಅನೇಕ ಯುವ ಕಲಾವಿದರು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ‘ಭೀಮಾ’ ಚಿತ್ರ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರ ಆಗಸ್ಟ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ.
Be the first to comment