ಯುವ ಪ್ರತಿಭೆ ರೋಹಿತ್ ನಟನೆಯ ‘ರಕ್ತಾಕ್ಷ’ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಟ್ರೇಲರ್ ಕುತೂಹಲ ಹೆಚ್ಚಿಸಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ರಕ್ತಾಕ್ಷ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ ವಿಜಯ್ ರಾಘವೇಂದ್ರ, ನಟಿ ಸುಮನ್ ನಗರ್ಕರ್ ಟ್ರೇಲರ್ ಬಿಡುಗಡೆ ಮಾಡಿ ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟಿದರು.
ನಟ ವಿಜಯ್ ರಾಘವೇಂದ್ರ ಮಾತನಾಡಿ, ”ಜನ ಈಗ ಎಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ ಎಂದರೆ ಟ್ರೇಲರ್ , ಟೀಸರ್ ನೋಡಿ ಥಿಯೇಟರ್ ಗೆ ಬರ್ತಾರೆ. ಕಥೆ ಇಷ್ಟ ಆದರೆ ಒಪ್ಪಿಕೊಳ್ಳುತ್ತಾರೆ. ಜನರ ನಂಬಿಕೆ, ವಿಶ್ವಾಸ ಸಿನಿಮಾದ ಮುಖಾಂತರ ಗೆಲ್ಲುವುದು ಸಾಹಸ. ಅಂತಹ ಸಾಹಸಕ್ಕೆ ರೋಹಿತ್ ಕೈ ಹಾಕಿದ್ದಾರೆ. ಟ್ರೇಲರ್ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕುತೂಹಲ ಕೆರಳಿಸುತ್ತದೆ. ಆಕ್ಷನ್, ಥ್ರಿಲ್ಲರ್ ಎಲಿಮೆಂಟ್ ಇದೆ. ನನಗೂ ಆಡಿಯನ್ಸ್ ಆಗಿ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ರೋಹಿತ್ ಬಹಳ ಕಷ್ಟಪಟ್ಟಿದ್ದಾರೆ . ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದರು.
ಹಿರಿಯ ನಟಿ ಸುಮನ್ ನಗರ್ಕರ್ ಮಾತನಾಡಿ,” ಟ್ರೇಲರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸರಣಿ ಕೊಲೆ ಇದೆ ಅನ್ನೋ ಕ್ಲ್ಯೂ ಇದೆ. ಮೂರ್ನಾಲ್ಕು ಜನ ಹೀರೋಯಿನ್ ಇರುವುದು ಗೊತ್ತಾಗುತ್ತದೆ. ಹೀಗಾಗಿ ಸರಣಿ ಕೊಲೆಯಾಗುತ್ತದೆ ಎಂಬ ಕ್ಲ್ಯೂ ಕೂಡ ಸಿಕ್ತು. ನನ್ನ ಪತಿ ಪೊಲೀಸ್ ಪಾತ್ರದಲ್ಲಿ ಮಾಡಿದ್ದಾರೆ. ಕಥೆ ಅವರು ಕೂಡ ಹೇಳಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ.ಎಲ್ಲರೂ ಪ್ರೋತ್ಸಾಹ ಕೊಡಬೇಕು. ಜನ ಥಿಯೇಟರ್ ಗೆ ಬರಬೇಕು. ಈ ರೀತಿಯ ಮಿಸ್ಟ್ರೀ ಸ್ಟೋರಿಯನ್ನು ಥಿಯೇಟರ್ ನಲ್ಲಿ ನೋಡಿ” ಎಂದು ಹೇಳಿದರು.
ವಕೀಲ ಹರ್ಷ ಮುತಾಲಿಕ್ ಮಾತನಾಡಿ, ”ರೋಹಿತ್ ನೋಡಿದರೆ ಹೆಮ್ಮೆ ಎನಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಮಾಡಿ ಅಲ್ಲಿ ಸಾಧನೆ ಮಾಡಿದ್ದಾನೆ. ನನ್ನ ಊರಿನ ಹುಡುಗ ಎತ್ತರಕ್ಕೆ ಬೆಳೆಯುತ್ತಾನೆ ಎಂದರೆ ನಮಗೆ, ನಮ್ಮ ಜಿಲ್ಲೆಗೂ ಹೆಮ್ಮೆ” ಎಂದರು.
ನಟ ರೋಹಿತ್ ಮಾತನಾಡಿ, ”ಹಾರ್ಡ್ ವರ್ಕ್ ಮಾಡಿ ಇಲ್ಲಿಗೆ ಬಂದಿದ್ದೇನೆ. ಥಿಯೇಟರ್ಸ್ ಮಾಡಿದೆ. ಅಲ್ಲಿ ಒಳ್ಳೆ ಪರ್ಫಾಮರ್ ಅಂತ ಹೆಸರು ಬಂತು. ಭಿಕ್ಷುಕ ರೋಲ್ ಮಾಡಿದೆ. ಅದೇ ರೋಲ್ ಹಿಟ್ ಆಯ್ತು. ಕನ್ನಡ ಚಿತ್ರರಂಗ ಒಂದು ಹೆಮ್ಮರ. ಈ ಹೆಮ್ಮರದಲ್ಲಿ ನಾನು ಒಂದು ಚಿಕ್ಕ ಹಸಿರು ಎಲೆಯಾಗಿದ್ದರೆ ನನ್ನ ಜೀವನ ಸಾರ್ಥಕ. ಉತ್ತರ ಕರ್ನಾಟಕದಲ್ಲಿ ಯಾರು ಹೀರೋ ಇಲ್ಲ ಎಂಬ ಕೊರಗು ಇದೆ” ಎಂದು ಹೇಳಿದರು.
ಜುಲೈ 26ಕ್ಕೆ ಚಿತ್ರ ಥಿಯೇಟರ್‌ಗಳಿಗೆ ಬರಲಿದೆ. ರೋಹಿತ್ ‘ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಾಸುದೇವ ಎಸ್.ಎನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಧೀರೇಂದ್ರ ಡಾಸ್ ಸಂಗೀತ,ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ,
ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಭು, ವಿಶ್ವ, ಭದ್ರಿ ನಾರಾಯಣ,, ಬಸವರಾಜ ಆದಾಪುರ, ಖಳನಾಯಕನ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.
Be the first to comment