ಜುಲೈ 16ರಂದು ಮ್ಯಾಕ್ಸ್‌ ಟೀಸರ್‌ ಬಿಡುಗಡೆ

ಕಿಚ್ಚ ಸುದೀಪ್​ ಅಭಿನಯದ ಮ್ಯಾಕ್ಸ್​ ಸಿನಿಮಾದ ಹೊಸ ಟೀಸರ್​ ಜುಲೈ 16ರಂದು ಮಧ್ಯಾಹ್ನ 12.34ಕ್ಕೆ ಬಿಡುಗಡೆ ಆಗಲಿದೆ.

ಕಳೆದ ವರ್ಷ ಕಿಚ್ಚ ಸುದೀಪ್​ ಅವರ ಜನ್ಮದಿನಕ್ಕೆ ಇಂಟರೆಸ್ಟಿಂಗ್​ ಟೀಸರ್​ ಅನಾವರಣ ಮಾಡಲಾಗಿತ್ತು. ಅದಕ್ಕೂ ಮುನ್ನ ಬಿಡುಗಡೆ ಆಗಿದ್ದ ಪ್ರೋಮೋ ಕೂಡ ಸಖತ್​ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಸುದೀಪ್​ ಅವರು ಸಖತ್ ಮಾಸ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

 ”ಮ್ಯಾಕ್ಸ್” ಚಿತ್ರದ ಹೊಚ್ಚ ಹೊಸ ಪೋಸ್ಟರ್​ ಹಂಚಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಜುಲೈ 16ರಂದು ಮಧ್ಯಾಹ್ನ 12.34ಕ್ಕೆ ದಂಡೆತ್ತಿ ಹೋಗಲು ಸಿದ್ಧರಾಗಿ ಎಂಬ ಸಂದೇಶವನ್ನೂ ಸುದೀಪ್ ನೀಡಿದ್ದಾರೆ.

ಬಿಗ್‌ ಬಜೆಟ್‌ನ ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾಲಿವುಡ್​ ನಿರ್ಮಾಪಕ ಕಲೈಪುಲಿ ಎಸ್​. ಧಾನು ಅವರು ಮ್ಯಾಕ್ಸ್​ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿಜಯ್​ ಕಾರ್ತಿಕೇಯ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್,  ಇಳವರಸು, ಸುನಿಲ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

ಇದು ಸುದೀಪ್​ ನಟನೆಯ 46ನೇ ಸಿನಿಮಾ. ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಅವರು ಸಂಗೀತ ನೀಡಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾ ಬಹುತೇಕ ಶೂಟಿಂಗ್​ ನಡೆದಿರುವುದು ವಿಶೇಷ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!