ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನಕ್ಕೆ ಇಡೀ ಕರ್ನಾಟಕ ಸೇರಿದಂತೆ ಹಿಂದಿ, ತೆಲುಗು, ಮಲಯಾಳಂ, ತಮಿಳು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಆದ್ರೆ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ, ತನಗೆ ಅಂಬರೀಶ್ ನಿಧನದ ಸುದ್ದಿ ಗೊತ್ತೇ ಇರಲಿಲ್ಲ, ನಿನ್ನೆಯಷ್ಟೇ ತಿಳಿಯಿತು ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ರು. ಹೀಗಾಗಿ ಹರ್ಷಿಕಾ ಅದಕ್ಕೀಗ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ್ದ ಹರ್ಷಿಕಾ, ಇಂದು ನನಗೆ ಅತ್ಯಂತ ದುಃಖದ ದಿನ. ನಾನು ಚಿತ್ರವೊಂದರ ಶೂಟಿಂಗ್ನಲ್ಲಿದ್ದೆ. ಹೀಗಾಗಿ ನವೆಂಬರ್ 23 ರಿಂದ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ಈಗ ತಿಳಿಯಿತು. ನಾನು ಎಂಥ ದುರಾದೃಷ್ಟವಂತೆ, ನಾನು ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ಸಿಕ್ಕಿಲ್ಲ ಅಂತಾ ಹೇಳಿದ್ದರು.
ಇಂದು ನನ್ನ ಅತ್ಯಂತ ದುಃಖದ ದಿನ 😣
ನಾನು ಒಂದು ಶೂಟ್ಗಾಗಿ 23 ರ ರಿಂದ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು
ನನ್ನ ನೆಚ್ಚಿನ ಅಂಬರೀಷ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು 😢
ನಾನು ಎಂಥ ದುರದೃಷ್ಟವಂತೆ , ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ 😭
Miss you #ಅಂಬರೀಶ್ uncle 😰 RIP pic.twitter.com/zJNldMbuwT— Harshika Poonacha (@actressharshika) November 30, 2018

Be the first to comment