‘ಒನ್ ಆಂಡ್ ಹಾಫ್’ ಹಾಡಿನ ಗ್ಲಿಂಪ್ಸ್​ ಬಿಡುಗಡೆ

ಆರ್​. ಚರಣ್ ಅವರ ನಿರ್ಮಾಣದ ‘ಒನ್ ಆಂಡ್ ಹಾಫ್’ ಚಿತ್ರದ ಹಾಡಿನ ಗ್ಲಿಂಪ್ಸ್​  ಚಿತ್ರತಂಡ ಬಿಡುಗಡೆ ಮಾಡಿದೆ.

ಚರಣ್ ಜನ್ಮದಿನದ ಪ್ರಯುಕ್ತ ‘ಒನ್ ಆಂಡ್ ಹಾಫ್’ ಚಿತ್ರದ ಹಾಡಿನ ಗ್ಲಿಂಪ್ಸ್​ ಅನಾವರಣ ಆಯಿತು.  ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಭಾಗಿಯಾಗಿದ್ದರು.

ಶ್ರೇಯಸ್ ಚಿಂಗಾ  ‘ಒನ್ ಆಂಡ್ ಹಾಫ್’ ಸಿನಿಮಾದಲ್ಲಿ ನಟಿಸಿ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದು. ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

‘ಇದು ತುಂಬ ಡಿಫರೆಂಟ್​ ಸಿನಿಮಾ’ ಎಂದು ಹೀರೋ ಕಮ್ ನಿರ್ದೇಶಕ ಶ್ರೇಯಸ್ ಚಿಂಗಾ ಹೇಳಿದ್ದಾರೆ.

‘ಶ್ರೇಯಸ್ ಈ ಮೊದಲು ಮಾಡಿದ್ದ ‘ಡೇವಿಡ್’ ಸಿನಿಮಾ ನೋಡಿ ಇಷ್ಟಪಟ್ಟಿದ್ದೆ. ನಾನು ಊಹೆ ಕೂಡ ಮಾಡಲು ಆಗದಂತಹ ರೀತಿಯಲ್ಲಿ ಸಿನಿಮಾ ಮಾಡಿದ್ದಾನೆ. ಯಾವುದಾದ್ರೂ ಕನ್ಸೆಪ್ಟ್ ಇದ್ದರೆ ಹೇಳು ಅಂತ ಕೇಳಿದೆ. ಅವನು ಹೇಳಿದ ಈ ಕಥೆ ನನಗೆ ತುಂಬ ಇಷ್ಟವಾಯಿತು’ ಎಂದು ನಿರ್ಮಾಪಕ  ಆರ್. ಚರಣ್ ಸುಬ್ಬಯ್ಯ ಹೇಳಿದ್ದಾರೆ.

ನಟಿ ಮಾನ್ವಿತಾ,  ‘ಇದು ನನಗೆ ವಿಶೇಷವಾದ ಸಿನಿಮಾ. ಈ ಸಿನಿಮಾ ಒಪ್ಪಿಕೊಂಡ ಮೇಲೆ ನನ್ನ ಬದುಕಿನಲ್ಲಿ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಶ್ರೇಯಸ್ ಅವರು ನಟನಾಗಿ ಹಾಗೂ ನಿರ್ದೇಶಕನಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

‘ಒನ್ ಆಯಂಡ್ ಹಾಫ್’ ಸಿನಿಮಾದಲ್ಲಿ ಶ್ರೇಯಸ್ ಚಿಂಗಾ ಜೊತೆ ಮಾನ್ವಿತಾ ಕಾಮತ್, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಅವಿನಾಶ್, ‘ಸ್ಪರ್ಶ’ ರೇಖಾ, ಸುಂದರಶ್ರೀ, ಅನಂತು, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್ ಕುಮಾರ್, ನಿಕಿತಾ ದೋರ್ತೊಡಿ, ಮಹಾಂತೇಶ್ ಹಿರೇಮಠ್, ಲಲಿತಾ ನಾಯಕ್, ಅಮಾನ್, ರೋಹಿತ್ ಅರುಣ್, ರಾಖಿ ಭೂತಪ್ಪ ಮುಂತಾದವರು ನಟಿಸಿದ್ದಾರೆ.

ಸಿನಿಮಾಗೆ ದೇವೇಂದ್ರ  ಛಾಯಾಗ್ರಹಣ ಮಾಡುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಿನಿಮಾಗಿದೆ. ರೊಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾವನ್ನು ‘ಸುಲಕ್ಷ್ಮೀ ಫಿಲ್ಮ್ಸ್‌’ ಮೂಲಕ ಆರ್. ಚರಣ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇಂಪನಾ ಪ್ರಸಾದ್, ಸಂತೋಷ್ ನಾಗೇನಹಳ್ಳಿ ಹಾಗೂ ಅರ್ಪಿತ್ ನಾರಾಯಣ್ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ.

ಇದು ಕಾಮಿಡಿ ಜಾನರ್​ನ ಸಿನಿಮಾ. ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ ಎನ್ನುತ್ತಿದೆ ಚಿತ್ರತಂಡ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!