ಮೊದಲಿಗೆ ಮಾತು ಪ್ರಾರಂಭಿಸಿದ ಅನಂತ್ ನಾಗ್, ಈ ಚಿತ್ರದಲ್ಲಿ ನಾನು ನಾಯಕನ ಅಜ್ಜನ ಪಾತ್ರ ಮಾಡುತ್ತಿದ್ದೇನೆ. ಪ್ರಸ್ತುತ ಟೆಕ್ಕಿಗಳ ಲೈಫ್ ಸ್ಟೈಲ್ ಹೇಗಿದೆ. ವಾರದ ಕೊನೆಯಲ್ಲಿ ಅವರು ಹೇಗೆ ಮೋಜು ಮಾಸ್ತಿ ಮಾಡುತ್ತಾರೆ ಎಂಬುದು ಈ ಚಿತ್ರದ ಒನ್ ಲೈನ್ ಸ್ಟೋರಿ ಎಂದರು.
ಈ ವೀಕೆಂಡ್ ಮಸ್ತಿಗೆ ತನ್ನ ಮೊಮ್ಮಗ ಅಟ್ರ್ಯಾಕ್ಟ್ ಆಗದ ಹಾಗೆ ತಾತ (ಅನಂತ್ ನಾಗ್ ) ಹೇಗೆ ನೋಡಿಕೊಳ್ಳುತ್ತಾನೆ. ರಾಯಲ್ ಲೈಫ್ ಲೀಡ್ ಮಾಡುವ ಟೆಕ್ಕಿಗಳು ಆಕಸ್ಮಾತಾಗಿ ಕೆಲಸ ಕಳೆದು ಕೊಂಡ್ರೆ ಹಣಕ್ಕಾಗಿ ಯಾವ ರೀತಿ ಪರಿತಪಿಸ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಿರ್ದೇಶಕ ಸುರೇಶ್ ಹೇಳಿಕೊಂಡ್ರು.
ಇನ್ನು ‘ವೀಕೆಂಡ್’ಚಿತ್ರದಲ್ಲಿ ಮಿಲಿಂದ್ ನಾಯಕ ನಟನಾಗಿ ನಟಿಸುತ್ತಿದ್ದು, ಬಿಇ ಮುಗಿಸಿರುವ ಈತ, ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
Tag #WEEKEND #Kannada #Anatnag #Srungeri Suresh #Bcinemas

Be the first to comment