ರಾಜರತ್ನ ನಿರ್ದೇಶನದ ಈ ಚಿತ್ರವನ್ನು ಲಕ್ಷ್ಮಿ ಷಣ್ಮುಖ ಅವರು ನಿರ್ಮಿಸಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಸಂದೇಶವನ್ನು ಈ ಚಿತ್ರ ಹೊಂದಿದೆ.
ಈಗಾಗಲೇ ಚಿತ್ರದ ಸೆನ್ಸಾರ್ ಮುಗಿದಿದೆ. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಯತ್ನಿಸಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
”ನಾನು ಸುಮಾರು 12 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಎಷ್ಟೋ ದೀರ್ಘ ಅವಧಿಯ ಅನುಭವವನ್ನು ತಾಜ್ ಚಿತ್ರದ ಮೂಲಕ ಪ್ರೇಕ್ಷಕರೆದುರು ಇಡುತ್ತಿದ್ದೇನೆ. ನಮ್ಮ ಸುತ್ತಮುತ್ತ ನಡೆದಿರುವ ಘಟನೆಯನ್ನು ಇಟ್ಟುಕೊಂಡು ಈ ಚಿತ್ರಕ್ಕೆ ಕಥೆ ಬರೆದಿದ್ದೇನೆ. ಒಂದಷ್ಟು ಸಿನಿ ಮ್ಯಾಟಿಕ್ ಅಂಶಗಳು ಸೇರಿಕೊಂಡಿರುವುದು ಬಿಟ್ಟರೆ ಚಿತ್ರ ರಿಯಲಿಸ್ಟಿಕ್ ಕಥೆ” ಎಂದು ನಿರ್ದೇಶಕ ರಾಜರತ್ನ ಹೇಳಿದ್ದಾರೆ.
ಸಿನಿಮಾ ನಿರ್ಮಾಣದ ಜೊತೆಗೆ ಷಣ್ಮುಖ ಚಿತ್ರದ ನಾಯಕ ಆಗಿ ನಟಿಸಿದ್ದಾರೆ.
”ಸಿನಿಮಾದಲ್ಲಿ ಮಾನವೀಯ ಮೌಲ್ಯಗಳನ್ನು ಹೇಳುವ ಯತ್ನ ಮಾಡಲಾಗಿದೆ. ಎಂಟು ತಿಂಗಳ ಹಿಂದೆ ಶುರುವಾದ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ” ಎಂದು ನಾಯಕ ಷಣ್ಮುಖ ಹೇಳಿದ್ದಾರೆ.
ಚಿತ್ರದ ನಾಯಕಿ ಅಪ್ಸರಾ. ಪದ್ಮಾ ವಾಸಂತಿ, ಬಲರಾಜವಾಡಿ, ಪಟ್ರೆ ನಾಗರಾಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೆಸ್ಸಿ ಗಿಫ್ಟ್ ಬಹಳ ಸಮಯದ ನಂತರ ಕನ್ನಡ ಸಿನಿಮಾಕ್ಕೆ ಮರಳಿದ್ದು ಚಿತ್ರಕ್ಕೆ ರಾಗ ಸಂಯೋಜಿಸಿದ್ದಾರೆ.
Be the first to comment