‘ಮೆಜೆಸ್ಟಿಕ್ 2’ ತಂಡ ಸೇರಿಕೊಂಡ ಶ್ರುತಿ

ಮೆಜೆಸ್ಟಿಕ್‌ನಲ್ಲಿ ನಡೆಯುವ ಘಟನೆಗಳನ್ನು ಕಥೆಯಾಗಿ ಹೊಂದಿರುವ ‘ಮೆಜೆಸ್ಟಿಕ್ 2’ ಸೆಟ್ಟೇರಿದ್ದು,  ಹಿರಿಯ ನಟಿ ಶ್ರುತಿ ‘ಮೆಜೆಸ್ಟಿಕ್ 2’ ತಂಡ ಸೇರಿಕೊಂಡಿದ್ದಾರೆ.

ದರ್ಶನ್‌ ಅಭಿನಯದ ‘ಮೆಜೆಸ್ಟಿಕ್‌’ ಚಿತ್ರಕ್ಕೆ ಕಥೆ ಬರೆದಿದ್ದ ನಿರ್ದೇಶಕ ರಾಮು ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಮೂಲಕ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಾಯಕನಾಗುತ್ತಿದ್ದಾರೆ. ಅಮ್ಮಾ ಎಂಟರ್‌ಪ್ರೈಸಸ್ ಮೂಲಕ ಚಿತ್ರದುರ್ಗದ ಟಿ.ಆನಂದಪ್ಪ ನಿರ್ಮಾಣದ ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ.

”ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಅವರನ್ನು ಖಳನಾಯಕರ ಗುಂಪು ಅಪಹರಣ ಮಾಡುತ್ತದೆ. ನಾಯಕ ಹಾಗೂ ಆತನ ಸ್ನೇಹಿತ ಶ್ರುತಿಯನ್ನು ಹುಡುಕಿಕೊಂಡು ಬರುವ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಪೂರ್ಣಗೊಂಡಿದೆ” ಎನ್ನುತ್ತಾರೆ ನಿರ್ದೇಶಕ ರಾಮು.

ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಕಾಣಿಸಿಕೊಂಡಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಛಾಯಾಗ್ರಹಣವಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!