‘ಖೈದಿ ನಂ. 6106’ ಟೈಟಲ್ ಗೆ ಡಿಮ್ಯಾಂಡ್‌

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತು ಸಿನಿಮಾ ಟೈಟಲ್ ಗಳಿಗಾಗಿ ಪೈಪೋಟಿ ಶುರುವಾಗಿದೆ.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ 17 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದ ಸಿನಿಮಾ ಟೈಟಲ್‌ಗಾಗಿ ನಿರ್ದೇಶಕರು ಮುಗಿಬಿದ್ದಿದ್ದಾರೆ.

ಖೈದಿ ನಂ. 6106 ಎಂಬ ಟೈಟಲ್ ರಿಜಿಸ್ಟರ್ ಮಾಡಿಸಲು ಭದ್ರಾವತಿ ಕುಮಾರ್ ಮುಂದಾಗಿದ್ದಾರೆ. ಆದರೆ ಫಿಲ್ಮ್ ಚೇಂಬರ್ ಕೇಸ್ ಕೋರ್ಟ್ ನಲ್ಲಿರೋ ಕಾರಣ ಟೈಟಲ್ ನೀಡದೆ ಇರಲು ತೀರ್ಮಾನ ಮಾಡಿದೆ.

‘ಡಿ ಗ್ಯಾಂಗ್ ‘ಹಾಗೂ ‘ಪಟ್ಟಣಗೆರೆ ಶೆಡ್ ‘ಎನ್ನುವ ಟೈಟಲ್‌ಗಾಗಿ ಫುಲ್ ಡಿಮ್ಯಾಂಡ್ ಕ್ರಿಯೇಟ್‌ ಆಗಿದೆ. ಮೆಜೆಸ್ಟಿಕ್ ಟು ಕಾಮಾಕ್ಷಿ ಪಾಳ್ಯ ಟೈಟಲ್ ಬೇಕೆಂದು  ಫಿಲ್ಮ್ ಚೇಂಬರ್‌ಗೆ ಮೊರೆ ಹೋಗಲಾಗಿದೆ. ಆದರೆ ಫಿಲ್ಮ್ ಚೇಂಬರ್ ಯಾವುದೇ ಟೈಟಲ್ ಕೊಟ್ಟಿಲ್ಲ.

”ಎರಡು ವರ್ಷಗಳ ಹಿಂದೆಯೇ ‘ಡಿ ಗ್ಯಾಂಗ್’ ಎನ್ನುವ ಕಥೆ ಮಾಡಲಾಗಿದೆ. ಕಥೆಗೂ ಈ ಘಟನೆಗೂ ಸಂಬಂಧ ಇಲ್ಲ” ಎಂದು ನಿರ್ದೇಶಕ ರಾಖಿ ಸೋಮ್ಲಿ ಹೇಳಿದ್ದಾರೆ.

ದರ್ಶನ್ ಜೈಲುಪಾಲು ಘಟನೆಗೆ ಸಂಬಂಧಪಟ್ಟ ಟೈಟಲ್‌ಗಳಿಗೆ ಫಿಲ್ಮ್ ಚೇಂಬರ್‌ನಲ್ಲಿ ಡಿಮ್ಯಾಂಡ್ ಹೆಚ್ಚಿದೆ. ‘ಮೆಜೆಸ್ಟಿಕ್ ಟು ಕಾಮಾಕ್ಷಿಪಾಳ್ಯ’,  ‘ಪಟ್ಟಣಗೆರೆ ಶೆಡ್ ‘ ಟೈಟಲ್ ಗೂ ಡಿಮ್ಯಾಂಡ್ ಜೋರಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!