ಜಯನಗರದಲ್ಲಿ “ಕೋಝ”ಎಸ್ತೆಟಿಕ್ ಕೇರ್ ಉದ್ಘಾಟನೆ ಮಾಡಿದ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ.
ಸೌಂದರ್ಯದ ಎಲ್ಲಾ ರೀತಿಯ ಚಿಕಿತ್ಸೆ ಮಾಡುವ “ಕೋಝ” ಎಸ್ತೆಟಿಕ್ ಕೇರ್ ಜಯನಗರದಲ್ಲಿ ತನ್ನ ಐದನೇ ಕೇಂದ್ರವನ್ನು ಆರಂಭಿಸಿದೆ. 2021 ಡಿಸೆಂಬರ್ ನಲ್ಲಿ ಸ್ಥಾಪನೆಗೊಂಡ “ಕೋಝ” ಎಸ್ತೆಟಿಕ್ ಕೇರ್ ಬೆಂಗಳೂರಿನಲ್ಲಿ ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ ಹಾಗೂ ಎಚ್ ಆರ್ ಬಿ ಆರ್ ಲೇಔಟ್ ನಲ್ಲಿ ಶಾಖೆಯನ್ನು ಹೊಂದಿದೆ. ಉತ್ತಮವಾದ ಗುಣಮಟ್ಟದ ಸೌಂದರ್ಯ ಸೇವೆಗಳಿಂದ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ.
ಕೋಝ ಎಸ್ಥೆಟಿಕ್ ಕೇರ್ ನ್ನು ಡಾ.ರುತುಜಾ ಆರ್ ಅಠವಳೆ, ಸುಧೀರ್ ಕುಮಾರ್ ಸಬ್ಬೇನಿ ಮತ್ತು ಸಂದೀಪ್ ರಾಜು ಅವರು ಸ್ಥಾಪಿಸಿದರು. ಗೋಯಲ್ ದಂಪತಿಗಳು ಇದರ ಪಾಲುದಾರರಾಗಿದ್ದಾರೆ.
ಜಯನಗರದಲ್ಲಿರುವ ಹೊಸ ‘ಕೋಝ’ ಸೌಂದರ್ಯದ ಆರೈಕೆ ಕೇಂದ್ರವು ಚರ್ಮದ ಯೌವನ ಪಡೆಯುವಿಕೆ, ಕೂದಲು ಪುನಃಸ್ಥಾಪನೆ, ತೂಕ ನಿರ್ವಹಣೆ ಸಂಬಂಧ ಪರಿಹಾರಗಳು, ಸೌಂದರ್ಯವರ್ಧಕ, ಸ್ತ್ರೀರೋಗ ಶಾಸ್ತ್ರ, ಸೌಂದರ್ಯದ ದಂತವೈದ್ಯಶಾಸ್ತ್ರ ಸೇರಿದಂತೆ ಸೌಂದರ್ಯದ ಆರೈಕೆಗೆ ಸಂಬಂಧಪಟ್ಟ ವಿಶೇಷ ಸೇವೆಗಳನ್ನು ಒದಗಿಸಲಿದೆ.
ಈ ಸಂದರ್ಭದಲ್ಲಿ ನಟ ಪ್ರಜ್ವಲ್ ದೇವರಾಜ್, ಕಿರುತೆರೆ ನಟಿ ಭವ್ಯ ಗೌಡ, ನಟಿ ಶ್ವೇತಾ ಸಂಜೀವುಲು ಹಾಗೂ ಗಣ್ಯರು ಆಗಮಿಸಿ ಶುಭ ಹಾರೈಸಿದರು.
____


Be the first to comment