Chilli Chicken Movie Review : ವಲಸಿಗರ ಕಥೆ ವ್ಯಥೆಯ ‘ಚಿಲ್ಲಿ ಚಿಕನ್’

ಚಿತ್ರ: ಚಿಲ್ಲಿ ಚಿಕನ್

ನಿರ್ದೇಶನ: ಪ್ರತೀಕ್ ಪ್ರಜೋಶ್
ತಾರಾಗಣ: ಶೃಂಗಾ, ಬಿಜೌ, ಜಿಂಪಾ ವಿಕ್ಟರ್, ಹರಿಣಿ ಸುಂದರ ರಾಜನ್, ಪದ್ಮಜಾ ರಾವ್ ಇತರರು

ರೇಟಿಂಗ್: 3.5/5

ಈಶಾನ್ಯ ಭಾರತದಿಂದ ಬೆಂಗಳೂರಿಗೆ ಬಂದು ನೆಲೆಸಿದ ವಲಸಿಗರ ಜೀವನದ ಕಥೆ, ವ್ಯಥೆಯನ್ನು ಹೇಳುವ ಚಿತ್ರ ಈ ವಾರ ತೆರೆಗೆ ಬಂದ ‘ಚಿಲ್ಲಿ ಚಿಕನ್’ ಸಿನಿಮಾ.

ಶೃಂಗಾ ಬೆಂಗಳೂರಿನಲ್ಲಿ ಚೈನೀಸ್ ಫುಡ್ ಸ್ಟಾಲ್ ನಡೆಸುತ್ತಿರುತ್ತಾರೆ. ಅವರ ಜೊತೆ ನಾಲ್ವರು ಕೆಲಸಗಾರರು ಇರುತ್ತಾರೆ. ಅವರ ಬಿಜಿನೆಸ್ ಹೇಳಿಕೊಳ್ಳುವ ಮಟ್ಟದಲ್ಲಿ ನಡೆಯುತ್ತಿರುವುದಿಲ್ಲ. ಹೀಗಿರುವಾಗ ಒಂದು ಮಧ್ಯರಾತ್ರಿಯ ಮೋಜಿನ ಪಾರ್ಟಿ ಎಲ್ಲವನ್ನೂ ಬದಲಾಯಿಸುತ್ತದೆ. ಇದು ಏನು ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಚಿತ್ರದಲ್ಲಿ ಮಣಿಪುರ, ಮೇಘಾಲಯ, ಚೆನ್ನೈ ಹಾಗೂ ಇತರ ಕಡೆಗಳಿಂದ ಬಂದ ವಲಸಿಗರು ನಟಿಸಿದ್ದಾರೆ. ಕನ್ನಡದ ಪ್ರಮುಖ ನಟರು ಚಿತ್ರದಲ್ಲಿ ನಟಿಸಿಲ್ಲ. ಬಿಜೌ, ಜೀಂಪಾ ವಿಕ್ಟರ್, ಟಾಮ್ ಥಿನ್, ಹರಿಣಿ ಚಿತ್ರದ ಪ್ರಮುಖ ಆಧಾರ ಸ್ತಂಭಗಳಾಗಿ ನಟಿಸಿದ್ದಾರೆ. ಪದ್ಮಜಾ ರಾವ್ ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಾರೆ.

ಚಿತ್ರದಲ್ಲಿ ವರ್ಣಭೇದ ನೀತಿ ಹಾಗೂ ತಾರತಮ್ಯದ ವಿಚಾರ ಇದೆ. ಆದರೆ ನಿರ್ದೇಶಕರು ಅದನ್ನು ಆಳವಾಗಿ ಹೇಳುವ ಯತ್ನವನ್ನು ಮಾಡಿಲ್ಲ. ಯಾವುದೇ ಉಪದೇಶ ನೀಡದೆ ಚಿತ್ರವನ್ನು ಪ್ರಸ್ತುತಪಡಿಸಿರುವುದು ನಿರ್ದೇಶಕರ ಹೆಚ್ಚುಗಾರಿಕೆ ಆಗಿದೆ.

ಈಶಾನ್ಯ ಭಾಗದ ನಟರ ಕನ್ನಡ ಮಾತನಾಡುವ ಪ್ರಯತ್ನ ಗಮನ ಸೆಳೆಯುತ್ತದೆ. ಕನ್ನಡ ಚಿತ್ರಗಳು ನೆಲ ಕಚ್ಚುತ್ತಿರುವ ಈ ಸಂದರ್ಭದಲ್ಲಿ ಈಶಾನ್ಯ ಭಾಗದ ಕಲಾವಿದರ ‘ಚಿಲ್ಲಿ ಚಿಕನ್’ ವಲಸೆ ಕಾರ್ಮಿಕರ ಕಥೆಯ ಜೊತೆಗೆ ಹಲವು ವಿಚಾರಗಳ ಮೂಲಕ ಗಮನ ಸೆಳೆಯುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!