ದರ್ಶನ್ ಗ್ಯಾಂಗ್ ಚಿತ್ರಹಿಂಸೆಯ ವಿವರ ಕೇಳಿ ಸಿಎಂ ಶಾಕ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಡೆದಿರುವ ಕ್ರೌರ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದು, ಪ್ರಕರಣ ಸಂಬಂಧ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರಿಂದ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಪಡೆದಿರುವ  ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆಯಲ್ಲಿ ಸಚಿವರ ಮುಂದೆ ಪ್ರಕರಣದ ಕ್ರೂರತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂಪುಟ ಸಭೆ ಆರಂಭದಲ್ಲೇ ಮಾತನಾಡಿದ ಸಿಎಂ ಈ ಕೊಲೆಯಂತ ಕ್ರೂರತನವನ್ನು ನಾನೂ ನೋಡಿಯೇ ಇಲ್ಲ. ಸಚಿವರಿಗೂ ಪ್ರಕರಣದ ಬಗ್ಗೆ ಮಾತಾಡದಂತೆ ಎಚ್ಚರಿಕೆ ನೀಡಿದ್ದಾರೆ.

”ಇದರಂತಹ ಕ್ರೂರತನ ನಾನು ನೋಡಿಯೇ ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಯಾರೂ ಮಾತಾಡಬೇಡಿ. ಅನಗತ್ಯವಾಗಿ ತುಟಿ ಬಿಚ್ಚಬೇಡಿ. ಪರ-ವಿರೋಧ ಚರ್ಚೆಯನ್ನೂ ಮಾಡಬೇಡಿ. ಕಾನೂನು, ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ. ನೀವು ಯಾರೂ ಕೊಲೆ ಬಗ್ಗೆ ಯಾವುದೇ ಚರ್ಚೆ ಮಾಡಬೇಡಿ” ಎಂದು ಸಿಎಂ ಹೇಳಿದ್ದಾರೆ.

ದರ್ಶನ್ ತಮ್ಮ ಪ್ರಭಾವ ಹಾಗೂ ಸಂಪರ್ಕಗಳನ್ನು ಬಳಸಿ ಪ್ರಕರಣದಲ್ಲಿ ಹೊರ ಬರಲು ಸಾಕಷ್ಟು ಕಸರತ್ತು ಮಾಡಿದ್ದರು. ಆಪ್ತರಾದ ಸಚಿವರು, ಶಾಸಕರು ಕೂಡ ಸಿಎಂ ಮೇಲೆ ಭಾರೀ ಒತ್ತಡ ತಂದಿದ್ದರು. ಎಸ್​ಪಿಪಿ ಪ್ರಸನ್ನ ಕುಮಾರ್ ಅವರನ್ನೂ ಬದಲಿಸಬೇಕೆಂದು ಸಚಿವರು ಒತ್ತಡ ಹೇರಿದ್ದರು. ಈ ಬಗ್ಗೆ ಪ್ರತಿಕ್ರಿಯೆಸಿದ್ದ ಸಿಎಂ ಎಸ್​ಪಿಪಿ ಬದಲಾವಣೆ ಇಲ್ಲ ಎಂದಿದ್ದರು.

ರೇಣುಕಾಸ್ವಾಮಿ ಕೈ ಮೇಲಿದ್ದ ಹಚ್ಚೆ ಕಿತ್ತು ಬರುವಂತೆ ಸುಟ್ಟಿದ್ದಾರೆ. ಎದೆ ಮೇಲೆ, ಕಾಲಿನ ಮೇಲೂ ಸುಟ್ಟ ಗಾಯಗಳಿವೆ.  ಬೆನ್ನ ತುಂಬಾ ರಕ್ತ ಹೆಪ್ಪುಗಟ್ಟುವಂತೆ, ಬಾಸುಂಡೆ ಬರುವಂತೆ ಹಲ್ಲೆ ನಡೆಸಲಾಗಿದೆ. ತಲೆಗೂ ರಕ್ತ ಬರುವಂತೆ ಹೊಡೆಯಲಾಗಿದೆ.  ಮರ್ಮಾಂಗಕ್ಕೆ ಹೊಡೆಯಲಾಗಿದೆ. ಅದನ್ನು ತೋರಿಸಲಾಗದು. ಅಷ್ಟೊಂದು ಭಯಾನಕವಾಗಿದೆ ಎಂದು ಸಿಎಂಗೆ ಪೊಲೀಸ್ ಮೂಲಗಳಿಂದ  ಮಾಹಿತಿ ನೀಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​​  ಹಾಗೂ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುವಾರ ಮತ್ತೆ ಎರಡು ದಿನ ಕಸ್ಟಡಿಗೆ ಪಡೆದಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!