‘ಹಮಾರೆ ಬಾರಾಹ್​’ ಸಿನಿಮಾ ಬಿಡುಗಡೆಗೆ ಅನುಮತಿ

ನ್ನು ಕಪೂರ್ ನಟನೆಯ ‘ಹಮಾರೆ ಬಾರಾಹ್​’ ಸಿನಿಮಾದ ಬಿಡುಗಡೆಗೆ ಬಾಂಬೆ ಹೈಕೋರ್ಟ್​ ಅನುಮತಿ ನೀಡಿದೆ.

ಮುಸ್ಲಿಂ ಧರ್ಮದವರ ಭಾವನೆಗಳಿಗೆ ‘ಹಮಾರೆ ಬಾರಾಹ್​’ ಸಿನಿಮಾ ಧಕ್ಕೆ ಉಂಟು ಮಾಡಲಿದೆ ಎಂದು ಕೆಲವರು ತಕರಾರು ತೆಗೆದಿದ್ದರು. ಸಿನಿಮಾ  ಖುರಾನ್​ ಭೋದನೆಗಳನ್ನು ತಪ್ಪಾಗಿ ಅರ್ಥೈಸಿದೆ ಎಂದು ತಕರಾರು ಮಾಡಲಾಗಿತ್ತು. ಆದರೆ   ಸಿನಿಮಾದಲ್ಲಿ ಆ ರೀತಿಯ ಯಾವುದೇ ಅಂಶಗಳು ಇಲ್ಲ ಎಂಬುದನ್ನು ಮನಗಂಡ ಬಳಿಕ ಬಾಂಬೆ ಹೈಕೋರ್ಟ್​ ಸಿನಿಮಾದ ಬಿಡುಗಡೆಗೆ ಆದೇಶ ನೀಡಿದೆ.

ಸಿನಿಮಾದ ಟ್ರೇಲರ್​ ಬಿಡುಗಡೆ ಆದ ನಂತರ ವಿವಾದ ಸೃಷ್ಟಿಯಾಗಿತ್ತು. ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ಡಿಲೀಟ್​ ಮಾಡಬೇಕು ಎಂಬ ಒತ್ತಾಯ ಕೇಳಿ ಬಂತು. ನ್ಯಾಯಾಲಯದ ಸೂಚನೆ ಮೇರೆಗೆ ನಿರ್ಮಾಪಕರು ಆ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಲು ಒಪ್ಪಿದ್ದಾರೆ. ಆದ್ದರಿಂದ ಸಿನಿಮಾದ ಬಿಡುಗಡೆಗೆ ಅನುಮತಿ ಸಿಕ್ಕಿದೆ.

“ಈ ಸಿನಿಮಾ ವಾಸ್ತವವಾಗಿ ಮಹಿಳೆಯರ ಉನ್ನತಿಗಾಗಿಯೇ ಇದೆ. ಚಿತ್ರದಲ್ಲಿ ಮೌಲನಾ ಒಬ್ಬರು ಕುರಾನ್ ಅನ್ನು ತಪ್ಪಾಗಿ ಅರ್ಥೈಸುವುದು ಇದೆ. ವಾಸ್ತವವಾಗಿ ಒಬ್ಬ ಮುಸ್ಲಿಂ ವ್ಯಕ್ತಿ ಅದೇ ದೃಶ್ಯವನ್ನು ವಿರೋಧಿಸುತ್ತಾನೆ. ಆದ್ದರಿಂದ ಜನರು ತಮ್ಮ ಮನಸ್ಸಿನ ಮಾತು ಕೇಳಬೇಕು. ಅಂತಹ ಮೌಲಾನಾಗಳನ್ನು ಕುರುಡಾಗಿ ಅನುಸರಿಸಬಾರದು ಎಂದು ತೋರಿಸುತ್ತದೆ” ಎಂದು ಬಾಂಬೆ ಹೈಕೋರ್ಟ್​ ಹೇಳಿದೆ.

”ಚಿತ್ರದ ಮೊದಲ ಟ್ರೇಲರ್ ಆಕ್ಷೇಪಾರ್ಹವಾಗಿತ್ತು. ಆದರೆ ಅದನ್ನು ತೆಗೆದುಹಾಕಲಾಗಿದೆ. ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ಚಲನಚಿತ್ರದಿಂದ ಡಿಲೀಟ್ ಮಾಡಲಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿಪಿ ಕೊಲಬಾವಾಲ್ಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ವಿಭಾಗೀಯ ಪೀಠ ಹೇಳಿದೆ.

ಇದು ವಾಸ್ತವವಾಗಿ “ಚಿಂತನಾತ್ಮಕ ಚಲನಚಿತ್ರ” ಎಂದು ನ್ಯಾಯಾಲಯ ಪರಿಗಣಿಸಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!