‘ಪೌಡರ್’ ಸಿನಿಮಾ ಆಗಸ್ಟ್ 15 ರಂದು ರಿಲೀಸ್

ಆಗಸ್ಟ್ 15 ರಂದು ‘ಪೌಡರ್’  ಸಿನಿಮಾ ರಿಲೀಸ್ ಆಗಲಿದೆ. ಜನರನ್ನು ಥಿಯೇಟರ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಉದ್ದೇಶದಿಂದ ಸಿನಿಮಾ ರಿಲೀಸ್ ದಿನಾಂಕ ಬದಲಾಗಿದೆ.

ಕೆ.ಆರ್‌.ಜಿ ಸ್ಟೂಡಿಯೋಸ್‌ ಮತ್ತು ಟಿ.ವಿ.ಎಫ್‌ ಮೋಷನ್‌ ಪಿಕ್ಚರ್ಸ್‌ನ ಚೊಚ್ಚಲ ಸಹಯೋಗದ ‘ಪೌಡರ್’ ಸಿನಿಮಾ ಈ ಹಿಂದೆ ಜುಲೈ 14ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಈಗ ಹೊಸ ಡೇಟ್ ಫಿಕ್ಸ್ ಮಾಡಲಾಗಿದೆ. ರಜಾ ದಿನಗಳಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ರಿಲೀಸ್ ದಿನಾಂಕ ಬದಲಾವಣೆ ಮಾಡಲಾಗಿದೆ.

 ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ ಮತ್ತು ರಂಗಾಯಣ ರಘು ನಟಿಸಿದ್ದಾರೆ. ಪೌಡರ್ ಶೀಘ್ರವಾಗಿ ಶ್ರೀಮಂತರಾಗಲು ಯೋಜನೆ ರೂಪಿಸುವ ಯುವಕರ ಗುಂಪಿನ ದುಸ್ಸಾಹಸಗಳ ಬಗ್ಗೆ ಹೆಣೆದ ಕಥೆಯಾಗಿದೆ.

ಚಿತ್ರವನ್ನು ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿದ್ದಾರೆ, ಟಿವಿಎಫ್ ಜೊತೆಗೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿದ್ದಾರೆ. ಮುಂದಿನ ವಾರದಲ್ಲಿ ಪೌಡರ್‌ನ ಮೊದಲ ಹಾಡು ಬಿಡುಗಡೆಯಾಗಲಿದೆ. ಪ್ರಸಿದ್ಧ ರ್ಯಾಪರ್ ಎಂಸಿ ಬಿಜ್ಜು ಮತ್ತು ವಾಸುಕಿ ವೈಭವ್ ಸಹಯೋಗದಲ್ಲಿ ಹಾಡು ಮೂಡಿ ಬಂದಿದೆ.

ಪೋಸ್ಟ್-ಪ್ರೊಡಕ್ಷನ್‌ ಹಂತದಲ್ಲಿರುವ ಚಿತ್ರಕ್ಕೆ ಸಂಕೀರ್ಣವಾದ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸದ ಅಗತ್ಯವಿದೆ. ಸಿನಿಮಾದ ಕೊನೆಯ 15 ನಿಮಿಷಗಳು ಪ್ರೇಕ್ಷಕರಿಗೆ ರೋಲರ್ ಕೋಸ್ಟರ್ ರೈಡ್ ನಂತೆ ಭಾಸವಾಗುತ್ತದೆ. ರೋಮಾಂಚಕ, ಹಿಂದೆಂದೂ ನೋಡಿರದ ಅನುಭವ ನೀಡಲಿದೆ ಎಂದು ಮೂಲವೊಂದು ತಿಳಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!