ಜುಲೈ 26 ಅಥವಾ ಆಗಸ್ಟ್ 15ಕ್ಕೆ ‘ಭೀಮ’ ರಿಲೀಸ್

ದುನಿಯಾ ವಿಜಯ್ನಿರ್ದೇಶಿಸಿ, ನಟಿಸಿರುವಭೀಮಸಿನಿಮಾ ಜುಲೈ 26ಕ್ಕೆ ಅಥವಾ  ಆಗಸ್ಟ್‌ 15ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ತೆಲುಗಿನಪುಷ್ಪ-2′ ಬಿಡುಗಡೆ ಮುಂದೂಡಿಕೆಯಾಗಿದ್ದು, ಅವಧಿಯಲ್ಲೇಭೀಮತೆರೆಗೆ ಬರುವ ಸಾಧ್ಯತೆ ಇದೆ. 2022 ಫೆಬ್ರುವರಿ 24ರಂದು ವಿಜಯ್ತಮ್ಮ 28ನೇ ಸಿನಿಮಾಭೀಮಘೋಷಿಸಿದ್ದರು. 2022 .18ಕ್ಕೆ ಸಿನಿಮಾದ ಮುಹೂರ್ತ ನಡೆದಿತ್ತು. ಎರಡು ವರ್ಷದ ಬಳಿಕ ಸಿನಿಮಾ ಬಿಡುಗಡೆಯಾಗುತ್ತಿದೆ.

ಚಿತ್ರದಲ್ಲಿ ಭೀಮನಿಗೆ ಜೋಡಿಯಾಗಿ ಅಶ್ವಿನಿ ನಟಿಸಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಕಲ್ಯಾಣಿ ಮತ್ತಿತರರು ಅಭಿನಯಿಸಿದ್ದಾರೆ. ಮಾಸ್ತಿ ಸಂಭಾಷಣೆಕೃಷ್ಣ ಸಾರ್ಥಕ್, ಜಗದೀಶ್ ಗೌಡ  ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!