Love Li movie review : ಪ್ರೀತಿಯ ಚಿತ್ರ “ಲವ್ ಲಿ”

ಚಿತ್ರ: ” ಲವ್ ಲಿ”

ನಿರ್ದೇಶನ: ಚೇತನ್ ಕೇಶವ್
ನಿರ್ಮಾಣ: ಅಭುವನಾಸ್ ಕ್ರಿಯೇಷನ್ಸ್
ತಾರಾ ಬಳಗ: ವಸಿಷ್ಠ ಸಿಂಹ, ಸ್ಟೇಫಿ ಪಟೇಲ್, ದತ್ತಣ್ಣ, ಸಾಧು ಕೋಕಿಲ, ಅಚುತ್ ಕುಮಾರ್ ಇತರರು

ರೇಟಿಂಗ್: 3. 5/5

ಒರಟನಾದ ವ್ಯಕ್ತಿ ಪ್ರೀತಿಯ ದಾಸನಾದಾಗ ಮುಂದೆ ಅವನ ಬದುಕಿನಲ್ಲಿ ಕಂಡು ಬರುವ ಪ್ರೀತಿಯ ಹೋರಾಟದ ಕಥೆ ಲವ್ ಲಿ.

ಶುದ್ಧ ಒರಟ ವ್ಯಕ್ತಿ ಜೈಯನ್ನು ಜನನಿ ಇಷ್ಟ ಪಡುತ್ತಾಳೆ. ಮುಂದೆ ಇಬ್ಬರು ಮದುವೆಯಾಗುತ್ತಾರೆ. ದಂಪತಿಗೆ ಮಗು ಜನಿಸಿದ ಬಳಿಕ ಜನನಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜನನಿ ಕಾಯಿಲೆಯಿಂದ ಸುಧಾರಿಸಿಕೊಳ್ಳುತ್ತಾಳೆಯೇ? ಜೈ ಹಾಗೂ ಜನನಿಯ ಪ್ರಪಂಚ ಲವ್ಲೀ ಆಗಿ ಇರುತ್ತದೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಈ ಚಿತ್ರವನ್ನು ಕ್ಲಾಸ್ ಹಾಗೂ ಮಸ್ ಮಿಕ್ಸ್ ಚಿತ್ರವೆನ್ನಬಹುದು. ನಿರ್ದೇಶಕರು ಸಮಾಜದಲ್ಲಿ ನಡೆಯುವ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಮರ್ಷಿಯಲ್ ಅಂಶವನ್ನು ಬಳಸಿಕೊಂಡು ಕಥೆ ಹೇಳುವ ಯತ್ನವನ್ನು ಮಾಡಿದ್ದಾರೆ.

ಪ್ರೀತಿ ಉಳಿಸಿಕೊಳ್ಳುವುದಕ್ಕೆ ಯಾವ ಹಂತಕ್ಕೆ ಬೇಕಾದರೂ ಹೋಗುವ ಕಥೆಯಾಗಿ ಈ ಚಿತ್ರ ನಿರೂಪಣೆಗೊಂಡಿದೆ. ಆದರೆ ನಿರ್ದೇಶಕರು ಕಥೆಯ ದೃಶ್ಯಗಳನ್ನು ಟ್ರಿಮ್ ಮಾಡಿದ್ದರೆ ಪ್ರೇಕ್ಷಕರಿಗೆ ಇನ್ನಷ್ಟು ಸಿನಿಮಾ ಆಪ್ತ ಆಗುತ್ತಿತ್ತು. ಕಾಮಿಡಿ ದೃಶ್ಯಗಳು, ಐಟಂ ಸಾಂಗ್ ಚಿತ್ರಕ್ಕೆ ಹೊಂದಿಕೆ ಆಗದೆ ಹಿನ್ನಡೆಯಾಗಿದೆ. ಒಂದಷ್ಟು ಹಿಂಸೆಯ ದೃಶ್ಯಗಳಿದ್ದು ಇದು ಪ್ರೇಕ್ಷಕರಿಗೆ ಸಹಿಸಿಕೊಳ್ಳಲು ಕಷ್ಟ ಎನಿಸುತ್ತದೆ.

ವಸಿಷ್ಠ ಸಿಂಹ ಚಿತ್ರದಲ್ಲಿ ಉತ್ತಮವಾಗಿ ಭಾವನೆ ವ್ಯಕ್ತಪಡಿಸಿದ್ದಾರೆ. ನಾಯಕಿ ಸ್ಟೇಫಿ ಪಟೇಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಪಂಚಿಂಗ್ ಸಂಭಾಷಣೆಗಳು ಹಾಸ್ಯ ತರುತ್ತವೆ. ಅಚುತ್ ಕುಮಾರ್, ದತ್ತಣ್ಣ ಸೇರಿದಂತೆ ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಪ್ರೀತಿಯ ಭಾವನಾತ್ಮಕ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಖುಷಿ ನೀಡಬಹುದು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!