‘ನನಗೊಂದು ಲವ್ ಬ್ರೇಕಪ್ ಆಗಿದೆ, ಸದ್ಯಕ್ಕೆ ಲವ್ ಮಾಡಲ್ಲʼ ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ.
‘ನನಗೆ ಬಾಯ್‌ಫ್ರೆಂಡ್ ಇದ್ದ. ಆದರೆ ಈಗ ಇಲ್ಲ. ಅಂದರೆ ನನ್ನ ಜತೆ ಇಲ್ಲ. ಹೊಸ ಅಪ್ಲಿಕೇಶನ್‌ಗೂ ಅವಕಾಶ ಇಲ್ಲ. ಯಾಕೆಂದರೆ, ನನಗೆ ಈಗ ಕೆಲಸ ಸಿಕ್ಕಾಪಟ್ಟೆ ಮುಖ್ಯ ಆಗಿದೆ. ಅದರಲ್ಲೇ ಬ್ಯೂಸಿ ಆಗಿದ್ದೇನೆ. ಕೆಲಸದ ಮೇಲೆಯೇ ಹೆಚ್ಚು ಫೋಕಸ್ ಆಗಿದ್ದೇನೆ. ಬೇರೆ ಯಾವುದಕ್ಕೂ ನನಗೆ ಟೈಮ್ ಇಲ್ಲ. ಹಾಗಾಗಿ ಹೊಸ ಅಪ್ಲಿಕೇಶನ್‌ಅನ್ನು ಯಾರಿಂದಲೂ ತೆಗೆದುಕೊಳ್ಳುತ್ತಿಲ್ಲʼ ಎಂದಿದ್ದಾರೆ. ಸಪ್ತಮಿ ಕೊಟ್ಟಿರುವ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.
ನಟ ಯುವ ರಾಜ್‌ಕುಮಾರ್ ನಟಿ ಸಪ್ತಮಿ ಗೌಡ ಜತೆ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ಪತ್ನಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು.
ಯುವ ರಾಜ್ ಕುಮಾರ್ ಅವರು ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡುವ ಸುದ್ದಿ ಹೊರ ಬಂದಾಗ ಶ್ರೀದೇವಿ ಅವರು ಯುವ, ಸಪ್ತಮಿ ಜೊತೆ ಇದ್ದರು ಎಂದು ಹೇಳಿಕೆ ನೀಡಿದ್ದರು.
—–
Post Views:
228
Be the first to comment