ಹೊಸ ಚಿತ್ರಗಳ ಬಿಡುಗಡೆಗೆ ತೊಡಕಾದ ದರ್ಶನ್ ಬಂಧನ

ಕೊಲೆ ಪ್ರಕರಣದಲ್ಲಿ ಆರೋಪಕ್ಕೆ ಒಳಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನಕ್ಕೆ ಒಳಗಾಗಿರುವ ಬೆನ್ನಲ್ಲೇ ಹೊಸ ಚಿತ್ರಗಳ ಬಿಡುಗಡೆಗೆ ತೊಡಕು ಉಂಟಾಗಿದೆ.

ಈ ವಾರ ಒಟ್ಟು 6 ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿವೆ. ಡಾಲಿ ಅಭಿನಯದ ಕೋಟಿ, ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ, ವಸಿಷ್ಠ ಸಿಂಹ ಹೀರೋ ಆಗಿರುವ ಲವ್ ಲಿ, ಅನಿರುದ್ಧ ಅಭಿನಯದ ಚೆಫ್ ಚಿದಂಬರ, ಹೊಸಬರ ಚಿ.ತು. ಸಂಘ, ಯಾವೋ ಇವೆಲ್ಲ ಶುಕ್ರವಾರ ಬಿಡುಗಡೆ ಆಗುತ್ತಿವೆ. ಆದರೆ ಮಾಧ್ಯಮಗಳು ದರ್ಶನ್ ಬಂಧನದ ಬಗ್ಗೆ ಹೆಚ್ಚಿನ ಸುದ್ದಿ ನೀಡುತ್ತಿರುವುದರಿಂದ ಹೊಸ ಚಿತ್ರಗಳ ಬಿಡುಗಡೆ ಬಗ್ಗೆ ಪ್ರಚಾರ ಕಡಿಮೆಯಾಗಿದೆ. ಇದು ಹೊಸ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.

ದರ್ಶನ್ ಬಂಧನದ ಸುದ್ದಿಯ ಬಗ್ಗೆ ಮಾಧ್ಯಮಗಳು ಹೆಚ್ಚಿನ ಒಲವನ್ನು ತೋರಿಸುತ್ತಿವೆ. ಬುಧವಾರ ಹಾಗೂ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಗಳು ರದ್ದಾಗಿವೆ. ಇದರಿಂದ ಚಿತ್ರತಂಡಗಳು ಅಸಹಾಯಕರಾಗಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ.

ಈ ವರ್ಷ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಕಂಡು ಬಂದಿಲ್ಲ. ಈ ವಾರ ಬಿಡುಗಡೆ ಆಗುತ್ತಿರುವ ಚಿತ್ರಗಳಿಗೆ ಪ್ರೇಕ್ಷಕರು ಬೆಂಬಲ ನೀಡುವ ನಿರೀಕ್ಷೆ ಇತ್ತು. ಆದರೆ ದರ್ಶನ್ ಬಂಧನದ ಸುದ್ದಿಯಿಂದ ಸದ್ಯ ಕನ್ನಡ ಚಿತ್ರರಂಗಕ್ಕೆ ಕಾರ್ಮೋಡ ಆವರಿಸಿದಂತೆ ಕಂಡು ಬರುತ್ತಿದೆ.

ಕನ್ನಡದ ಪ್ರೇಕ್ಷಕರು ಈ ವಾರ ಯಾವ ಚಿತ್ರಗಳನ್ನು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಶುಕ್ರವಾರದವರೆಗೆ ಕಾಯಬೇಕಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!