Young Man Movie Review : ದೇಶಪ್ರೇಮದ ಯಂಗ್ ಮ್ಯಾನ್

ಚಿತ್ರ: ಯಂಗ್ ಮ್ಯಾನ್

ನಿರ್ದೇಶಕ: ಮುತ್ತುರಾಜ್
ನಿರ್ಮಾಪಕರು: ವಿಜಯಲಕ್ಷ್ಮಿ, ರಾಮೇಗೌಡ
ತಾರಾಗಣ: ಸುನಿಲ್ ಗೌಡ, ನಯನ ಪುಟ್ಟಸ್ವಾಮಿ, ಆನಂದ್ ಕೆಂಗೇರಿ, ಶೃತಿ ಗೌಡ, ತನುಜ ಇತರರು

ರೇಟಿಂಗ್: 3.5/5

ಮನರಂಜನಾತ್ಮಕವಾಗಿ ದೇಶ ಭಕ್ತಿಯ ಕುರಿತು ತೆರೆಯ ಮೇಲೆ ಬಂದಿರುವ ಸಿಂಗಲ್ ಟೇಕ್ ಚಿತ್ರ ಯಂಗ್ ಮ್ಯಾನ್.

ಹೊಸ ಬಗೆಯ ಪ್ರಯೋಗವಾಗಿ ಚಿತ್ರ ತೆರೆಯ ಮೇಲೆ ಬಂದಿದೆ. ಚಿತ್ರದಲ್ಲಿ ಒಟ್ಟು ಏಳು ಪಾತ್ರಗಳಿವೆ. ಯಾರು ಊಹೆ ಮಾಡದ ರೀತಿಯಲ್ಲಿ ಕ್ಲೈಮ್ಯಾಕ್ಸ್ ದೃಶ್ಯವನ್ನು ನಿರ್ದೇಶಕರು ಚಿತ್ರೀಕರಿಸುವ ಮೂಲಕ ಮೆಚ್ಚಿಗೆ ಪಡೆದಿದ್ದಾರೆ.

ಬೇರೆ ಭಾಷೆಗಳಲ್ಲಿ ಇಲ್ಲದ ಕಂಟೆಂಟ್ ಈ ಚಿತ್ರದಲ್ಲಿದೆ. ದೇಶ ಪ್ರೇಮಿಯ ಕಥೆಯನ್ನು ಮನರಂಜನಾತ್ಮಕವಾಗಿ ಹೇಳಿರುವುದು ಗಮನ ಸೆಳೆಯುತ್ತದೆ.

ಕನಕಪುರ ಬಳಿಯ ಮನೆ ಒಂದರಲ್ಲಿ ಸತತ ಎರಡೂವರೆ ಗಂಟೆಗಳ ಕಾಲ ಶೂಟಿಂಗ್ ಮಾಡಲಾಗಿದೆ. ಕಲಾವಿದರಲ್ಲರಿಗೂ ತರಬೇತಿ ನೀಡಿ ಅವರಿಂದ ಉತ್ತಮ ಅಭಿನಯವನ್ನು ತೆಗೆಯುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಸುನಿಲ್ ಗೌಡ, ನಯನ ಪುಟ್ಟಸ್ವಾಮಿ, ರಾಶಿಕಾ ಪುಟ್ಟಸ್ವಾಮಿ, ಆನಂದ್ ಕೆಂಗೇರಿ, ಶೃತಿ ಗೌಡ, ತನುಜಾ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಬ್ಯಾಕ್ ಗ್ರೌಂಡ್ ಸ್ಕೋರ್ ಸಿನಿಮಾ ನೋಡುವಾಗ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನಿರ್ದೇಶಕರು ಚಿತ್ರವನ್ನು ಆರಂಭದಿಂದ ಅಂತ್ಯದವರೆಗೆ ಕುತೂಹಲವಾಗಿ ತೆಗೆದುಕೊಂಡು ಹೋಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!