ಒಮ್ಮೆ ಅರ್ಜುನ್ ಸರ್ಜಾರವರ ತಂದೆ ಶಕ್ತಿಪ್ರಸಾದ್ ಕಾರು ಕಲಿಯಬೇಕು ಎಂದುಕೊಂಡಿದ್ದರಂತೆ. ಆದರೆ ಕಾರು ಕೊಳ್ಳುವಷ್ಟು ಹಣ ಅವರ ಬಳಿ ಇರಲಿಲ್ಲ. ಆಗ ಅಂಬರೀಶ್ ಬಳಿ ಹೋಗಿ ಹಣ ಕೇಳಿದರಂತೆ. ತಕ್ಷಣವೇ ಅವರಿಗೆ ಹಣ ಕೊಟ್ಟು ಕಾರು ಕೊಳ್ಳುವ ಆಸೆ ಪೂರೈಸಿದ್ದರಂತೆ ಅಂಬಿ.
ಡಾಕ್ಟರ್ ರಾಜ್ಕುಮಾರ್ ಅವರ ಅಳಿಯ ಗೋವಿಂದರಾಜು ಅನಾರೋಗ್ಯದಿಂದಾಗಿ ಅಮೆರಿಕದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ 1000 ಡಾಲರ್ ಹಣದ ಅವಶ್ಯಕತೆ ಇತ್ತಂತೆ. ಆಗಲೂ ಉದಾರಿಯಾದ ಇವರು 1,000 ಸಾಲುವುದಿಲ್ಲ ಎಂದು ಹೇಳಿ 5000 ಡಾಲರ್ ನೀಡಿದ್ದರಂತೆ.
ಕನ್ನಡ ಚಿತ್ರರಂಗದ ಟೈಗರ್ ಪ್ರಭಾಕರ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರ ಸಹಾಯಕ್ಕೆ ಯಾರು ಬಂದಿರಲಿಲ್ಲವಂತೆ. ಆಗ ಆಸ್ಪತ್ರೆಯ ಬಿಲ್ ಪಾವತಿಸಿ ಟೈಗರ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿ ಮಾನವೀಯತೆ ಮೆರದಿದ್ದು ಕೂಡ ಎಲ್ಲರ ಪ್ರೀತಿಯ ಇದೇ ಜಲೀಲ.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೂ ಕೂಡ ಅಂಬರೀಶ್ ಸಹಾಯ ಮಾಡಿದ್ದಾರೆ. ಬೆಂಗಳೂರಿನಲ್ಲಿ ಒಮ್ಮೆ ವಿಶ್ವಸುಂದರಿ ಸ್ಪರ್ಧೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರಕ್ಷಣೆಗಾಗಿ ಹಣ ಪಾವತಿ ಮಾಡಬೇಕಿತ್ತು. ಆದರೆ ಅಷ್ಟೊಂದು ಹಣ ಅಮಿತಾಬ್ ಬಳಿ ಇರಲಿಲ್ಲ. ಆಗ ಆ ಹಣವನ್ನು ಸ್ವತಃ ಅಂಬಿ ನೀಡಿ ಸಹಾಯ ಮಾಡಿ ದೊಡ್ಡತನ ಮೆರೆದಿದ್ದರು.
ಒಮ್ಮೆ ಸುಧೀರ್ ಮನೆ ಕಟ್ಟುವ ಸಂದರ್ಭದಲ್ಲಿ ಅಂಬರೀಶ್ ಅವರ ಬಳಿ ಸಾಲ ಕೇಳುತ್ತಾರೆ. ಆಗ ಅಂಬಿ, ನೀನು ನನ್ನ ಗೆಳೆಯ ಸಾಲ ಎಂದು ತಿಳಿಯದೇ ಗಿಫ್ಟ್ ಎಂದು ತೆಗೆದುಕೋ ಎಂದಿದ್ದರಂತೆ. ಖಳ ನಟ
ವಜ್ರಮುನಿ ಅವರು ಹಲವು ಚಿತ್ರಗಳನ್ನು ನಿರ್ಮಿಸಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಗಂಡಭೇರುಂಡ ಚಿತ್ರ ನಿರ್ಮಿಸುವಂತೆ ಅಂಬರೀಶ್ ತಿಳಿಸಿ ತಾವು ಕೂಡ ನಟಿಸಿದ್ದರು. ಆದರೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಈ ಚಿತ್ರದಲ್ಲಿ ಕಡಿಮೆ ಸಂಭಾವನೆಗೆ ನಟಿಸುವಂತೆ ಶಂಕರ್ ನಾಗ್ ಹಾಗೂ ಶ್ರೀನಾಥ ಅವರಿಗೂ ಮನವಿ ಮಾಡಿದ್ದರಂತೆ ಮಂಡ್ಯದ ಗಂಡು.ಚಿತ್ರರಂಗದವರಿಷ್ಟೇ ಅಲ್ಲ ಸಾರ್ವಜನಿಕರಿಗೂ ಹಲವು ಸಹಾಯ ಮಾಡಿದ್ದಾರೆ. ಮಂಡ್ಯ ಜಿಲ್ಲೆಗೆ ಭೇಟಿ ನೀಡಿದಾಗ ಅವರ ಮನೆಗೆ ಸಹಾಯ ಕೇಳಲೆಂದೇ ನೂರಾರು ಜನ ಬರುತ್ತಿದ್ದರು. ಒಮ್ಮೆ ರಾಮನಗರದಲ್ಲಿ ಚುನಾವಣೆಗೆ ಸ್ಪರ್ಧಿಸುವ ವೇಳೆ ಕಾರ್ಖಾನೆಯೊಂದರಲ್ಲಿ ಘರ್ಷಣೆ ನಡೆದು ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಇದರಿಂದ ತೀವ್ರ ಮನನೊಂದ ಅಂಬರೀಶ್ ಅವರು ಮೃತ ವ್ಯಕ್ತಿಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹಣ ನೀಡುತ್ತಿದ್ದರು.

ಬೆಂಗಳೂರಿನ ಕಪಾಲಿ ಚಿತ್ರಮಂದಿರದ ಬಳಿಯ ಗಂಗಾರಾಮ್ ಕಟ್ಟಡ ಕುಸಿದು ಬಿದ್ದ ಸಂದರ್ಭದಲ್ಲಿ ಹಲವು ಮಂದಿ ಅಸುನೀಗಿದ್ದರು. ಆ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅಲ್ಲಿನ ಜನರಿಗೆ ಊಟ ಉಪಚಾರ ಸೇರಿದಂತೆ ತಮ್ಮ ಕೈಲಾದ ಸಹಾಯ ಮಾಡಿದ್ದರು.
ಸಹಾಯ ಕೇಳಿ ಬಂದವರಿಗೆ ಸಹಾಯ ಹಸ್ತ ನೀಡುತ್ತಿದ್ದ ಅಂಬರೀಶ್ ಅವರ ಈ ಗುಣದಿಂದಾಗಿ ಅವರನ್ನು ಕನ್ನಡ ಚಿತ್ರರಂಗದ ದಾನ ಶೂರ ಕರ್ಣ ಎಂದೇ ಕರೆಯುತ್ತಿದ್ದರು.
Pingback: www.tinysexdolls.com
visit: https://bcinemas.in/amaranatha-dhana-shuna-karna/