ಕುತೂಹಲ ಮೂಡಿಸಿದ ‘ಕೋಟಿ’ ಟ್ರೈಲರ್

ಡಾಲಿ ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ.

ಪರಮ್ ನಿರ್ದೇಶನ ಮಾಡಿರುವ ಕೋಟಿ ಚಿತ್ರದಲ್ಲಿ ಡಾಲಿ ಪಾತ್ರ ಡಿಫರೆಂಟ್ ಆಗಿ ಕಂಡು ಬಂದಿದೆ. ಚಿತ್ರದ ಟೈಲರ್ ಜೂನ್ 5ರಂದು ಬಿಡುಗಡೆಯಾಗಿದ್ದು, ಸಿನಿ ಪ್ರಿಯರಿಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಕೋಟಿ ಸಿನಿಮಾದಲ್ಲಿ ರಮೇಶ್ ಇಂದಿರಾ ಅವರು ವಿಲನ್ ಪಾತ್ರ ಮಾಡಿದ್ದಾರೆ. ಅವರು ದೀನ್ ಸಾಹುಕಾರ್ ಪಾತ್ರವನ್ನು ಮಾಡಿದ್ದಾರೆ. ಟೈಲರ್ ನಲ್ಲಿ ಡಾಲಿ ಹಾಗೂ ರಮೇಶ್ ಇಂದಿರಾ ಅವರ ಮುಖಾಮುಖಿ ದೃಶ್ಯಗಳು ಕಂಡು ಬಂದಿವೆ.

ಕೋಟಿ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿರುವುದು ಟ್ರೈಲರ್ ನಲ್ಲಿ ಕಂಡು ಬಂದಿದೆ. ಡಾಲಿ ಪಂಚಿಂಗ್ ಡೈಲಾಗ್ ಗಳು ಗಮನ ಸೆಳೆದಿವೆ.

ಚಿತ್ರದಲ್ಲಿ ರಂಗಾಯಣ ರಘು, ತಾರಾ ಅನುರಾಧ, ಮೋಕ್ಷ ಕುಶಾಲ್, ತನುಷಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ.

ಜಿಯೋ ಸ್ಟುಡಿಯೋಸ್ ಮೂಲಕ ಜ್ಯೋತಿ ದೇಶಪಾಂಡೆ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಾಸುಕಿ ವೈಭವ್ ಸಂಗೀತ, ನೋಬಿನ್ ಪೌಲ್ ಹಿನ್ನೆಲೆ ಸಂಗೀತ ಸಿನಿಮಾಕ್ಕೆ ಇದೆ.

ಕೋಟಿ ಚಿತ್ರ ಜೂನ್ 14ರಂದು ತೆರೆ ಕಾಣಲಿದೆ. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.


_

Be the first to comment

Leave a Reply

Your email address will not be published. Required fields are marked *

Translate »
error: Content is protected !!