ಸಿಂಗಲ್​ ಟೇಕ್​ ಸಿನಿಮಾ ‘ಯಂಗ್​ ಮ್ಯಾನ್​’ ಜೂನ್​ 7ಕ್ಕೆ ರಿಲೀಸ್​

ಸಿಂಗಲ್​ ಟೇಕ್​ ಸಿನಿಮಾ ‘ಯಂಗ್​ ಮ್ಯಾನ್​’ ಜೂನ್ 7ರಂದು ರಿಲೀಸ್​ ಆಗಲಿದೆ.

ಡಿಎಸ್​ಕೆ ಸಿನಿಮಾಸ್​ ಸಂಸ್ಥೆಯ ಮುಖ್ಯಸ್ಥರಾದ ಸುನಿಲ್ ಕುಂಬಾರ್ ಅವರು ‘ಯಂಗ್​ ಮ್ಯಾನ್’ ಸಿನಿಮಾವನ್ನು​ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಸಿನಿಮಾಗೆ ಮುತ್ತುರಾಜ್ ಅವರು ನಿರ್ದೇಶನ ಮಾಡಿದ್ದಾರೆ. ವಿಜಯಲಕ್ಷ್ಮಿ ರಾಮೇಗೌಡ ಅವರು ಬಂಡವಾಳ ಹೂಡಿದ್ದಾರೆ.‌

ಚಿತ್ರದಲ್ಲಿ ದೇಶಪ್ರೇಮದ ಕುರಿತಾದ ಕಥಾಹಂದರ ಇರಲಿದೆ. ಸುನೀಲ್ ಗೌಡ, ಹರೀಶ್ ಆಚಾರ್ಯ, ರಾಶಿಕಾ ಕರಾವಳಿ, ಶ್ರುತಿ ಗೌಡ, ಆನಂದ್​ ಕುಮಾರ್, ಋಷಿ ಅನಿತಾ, ನಯನಾ, ತನುಜಾ, ಜಯರಾಮ್, ಅನುಕುಮಾರ್ ಮುಂತಾದ ಕಲಾವಿದರು ನಟಿಸಿದ್ದಾರೆ.

ಎಸ್. ನಾರಾಯಣ್ ಅವರ ನಿರ್ದೇಶನದ ‘ದಕ್ಷ’ ಸಿನಿಮಾವನ್ನು ಸಿಂಗಲ್​ ಟೇಕ್​ನಲ್ಲಿ ಚಿತ್ರಿಸಲಾಗಿತ್ತು. ಶಂಕರ್ ನಾಗ್ ಅವರು ಅಭಿನಯಿಸಿದ ‘ಇದು ಸಾಧ್ಯ’ ಸಿನಿಮಾ ಕೇವಲ 36 ಗಂಟೆಯಲ್ಲಿ ಚಿತ್ರೀಕರಣ ಮುಗಿಸಿ ದಾಖಲೆ ಬರೆದಿತ್ತು.

”ಈ ಸಿನಿಮಾಕ್ಕೆ ಸುಮಾರು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೆ ನಟಿಸಿರುವ ಕಾರಣ ಅವರಿಗೆಲ್ಲಾ ತರಬೇತಿ ನೀಡಿ ಆನಂತರ ಚಿತ್ರೀಕರಣ ಮಾಡಿದ್ದೇನೆ” ಎಂದಿದ್ದಾರೆ ಮುತ್ತುರಾಜ್.

ಸಿನಿಮಾಗೆ ಕ್ರಿಯೇಟಿವ್ ಹೆಡ್ ಆಗಿ ಮುರಳಿ ಎಸ್.ವೈ. ಅವರು ಕೆಲಸ ಮಾಡಿದ್ದಾರೆ. ಲೋಕಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಗರಾಜ್ ವೀನಸ್ ಮೂರ್ತಿ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!