ಮೇ 31ಕ್ಕೆ ಟಿಕೆಟ್ ದರ ₹99

ಪಿವಿಆರ್, ಐನಾಕ್ಸ್‌, ಸಿನಿಪೊಲಿಸ್ ಇಂಡಿಯಾ, ಮೂವಿಮ್ಯಾಕ್ಸ್‌ ಸೇರಿದಂತೆ ಹಲವು ಸಿನಿಮಾ ಚಿತ್ರಮಂದಿರಗಳು ಮೇ 31ರಂದು ಟಿಕೆಟ್ ದರವನ್ನು ₹99ಕ್ಕೆ ನೀಡಲು ನಿರ್ಧರಿಸಿವೆ. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ನೋಡಲು ಬರುವ ನಿರೀಕ್ಷೆ ಇದೆ.

ಸಿನಿಮಾ ಪ್ರಿಯರ ದಿನವೆಂದು ಮೇ 31ರಂದು ಆಚರಿಸಲಾಗುತ್ತಿದೆ.  ಹೆಚ್ಚು ಜನರನ್ನು ಸಿನಿಮಾ ಮಂದಿರಗಳತ್ತ ಸೆಳೆಯಲು ಏಕ ಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳು ಜತೆಗೂಡಿ ವಿನೂತನ ಪ್ರಯತ್ನಕ್ಕೆ ಕೈಹಾಕಿವೆ.

ದೇಶವ್ಯಾಪಿ ಸುಮಾರು ನಾಲ್ಕು ಸಾವಿರ ಪರದೆಗಳಿವೆ. ಇವುಗಳಲ್ಲಿರುವ ಆರಾಮ ಚೇರ್‌ಗಳನ್ನೊಳಗೊಂಡ ವಿಶೇಷ ಸವಲತ್ತಿನ ಆಸನಗಳನ್ನು ಹೊರತುಪಡಿಸಿ ಉಳಿದ ಶೇ 90ರಿಂದ 95ರಷ್ಟು ಆಸನಗಳ ಬೆಲೆ ಮೇ 31ರಂದು ₹99 ಇರಲಿದೆ.

2022ರಲ್ಲಿ ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಇದೇ ರೀತಿಯ ಕೊಡುಗೆಯನ್ನು ಘೋಷಿಸಲಾಗಿತ್ತು. ಸುಮಾರು ₹65 ಲಕ್ಷದಷ್ಟು ಹೆಚ್ಚಿನ ವಹಿವಾಟು ನಡೆದಿತ್ತು. ಕೊರೊನಾ ವೈರಸ್ ಹಾವಳಿ  ನಂತರ ಮಲ್ಟಿಪ್ಲೆಕ್ಸ್​ ಮತ್ತು ಏಕಪರದೆ ಚಿತ್ರಮಂದಿರಗಳಲ್ಲಿ ಬಂದು ಸಿನಿಮಾ ನೋಡುವವರು ಸಂಖ್ಯೆ ಗಣನೀಯವಾಗಿ ಕುಸಿದಿದೆ.  ಮತ್ತೆ ಪ್ರೇಕ್ಷಕರನ್ನು ಸೆಳೆಯಲು ಮಲ್ಟಿಪ್ಲೆಕ್ಸ್​ಗಳ ಹೊಸ ತಂತ್ರ ರೂಪಿಸಿವೆ. ‘ಸಿನಿಮಾ ಲವರ್ಸ್​ ಡೇ’ ಹೆಸರಲ್ಲಿ ಆಫರ್​ ಬೆಲೆಗೆ ಟಿಕೆಟ್​ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯಲಾಯಿತು. ಈ ವರ್ಷ ಮೇ 31ರಂದು ‘ಸಿನಿಮಾ ಲವರ್ಸ್​ ಡೇ’ ಸೆಲೆಬ್ರೇಟ್​ ಮಾಡಲಾಗುತ್ತಿದೆ.

ಸದ್ಯ  ಶ್ರೀಕಾಂತ್, ಮ್ಯಾಡ್‌ ಮ್ಯಾಕ್ಸ್‌ ಚಿತ್ರಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ಇದೆ. ಮಿಸ್ಟರ್ ಹಾಗೂ ಮಿಸಸ್‌ ಮಹಿ, ಚೋಟಾ ಭೀಮ್, ಕರ್ಸ್‌ ಆಫ್ ಡಮ್ಯಾನ್‌ ಚಿತ್ರಗಳು ಮೇ 31ರಂದು ಬಿಡುಗಡೆಯಾಗುತ್ತಿವೆ.

ಟಿಕೆಟ್ ದರ ₹99 ಒಂದು ದಿನದ ಮಟ್ಟಿಗೆ ನೀಡಲಾಗುತ್ತಿರುವ ಕೊಡುಗೆ. ಇದು ಬಾಕ್ಸ್ ಆಫೀಸ್ ಮೇಲೆ ದೊಡ್ಡ ಪರಿಣಾಮ ಬೀರದಿದ್ದರೂ  ಒಂದಷ್ಟು ಕೊಡುಗೆ  ನೀಡಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!